ಬಹು ಅಂಗಾಂಗ ವೈಫಲ್ಯ: ಬರೋಬ್ಬರಿ 125 ವರ್ಷಗಳನ್ನು ಕಂಡ ಈ ಹಿರಿಯ ಇನ್ನು ನೆನಪು ಮಾತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 125 ವರ್ಷಗಳನ್ನು ಕಂಡ ಹೈದರಾಬಾದ್‌ನ ಗ್ಯಾಲಪಗೋಸ್ ದೈತ್ಯ ಆಮೆ ಇಹಲೋಕ ತ್ಯಜಿಸಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಆಮೆ ಇಲ್ಲಿನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 125 ವರ್ಷ ಜೀವಿತಾವಧಿ ಕಂಡಿದ್ದ ಈ ಆಮೆ ಅತೀ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತಲ್ಲದೆ ಮೃಗಾಲಯದಲ್ಲಿ ವಿಶೇಷ ಆಕರ್ಷಣೆಯ ಕೇಂದ್ರಬಿಂದುವೂ ಆಗಿತ್ತು.
ಕಳೆದ 10 ದಿನಗಳಿಂದ ಆಮೆ ಆಹಾರ ಸೇವನೆ ಮಾಡುತ್ತಿರಲಿಲ್ಲ. ಮೃಗಾಲಯದ ಪಶುವೈದ್ಯಕೀಯ ತಂಡವು ಇದಕ್ಕೆ ಚಿಕಿತ್ಸೆ ನೀಡುತ್ತಿತ್ತು. ಮೃಗಾಲಯ ಉದ್ಘಾಟನೆಯಾದಾಗಿನಿಂದ 95 ವರ್ಷದ ಮತ್ತೊಂದು ಆಮೆಯೊಂದಿಗೆ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಈ ಆಮೆಯನ್ನು 1963ರಲ್ಲಿ ನಗರದ ಸಾರ್ವಜನಿಕ ಉದ್ಯಾನವನದಿಂದ ಸ್ಥಳಾಂತರಿಸಲಾಗಿತ್ತು.
ಆಮೆಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಹೆಚ್ಚಿನ ಪರಿಶೀಲನೆಗಾಗಿ ಮಾದರಿಗಳನ್ನು ರಾಜೇಂದ್ರನಗರದ ವಿಬಿಆರ್‌ಐ ಮತ್ತು ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!