ಎರಡನೇ ತ್ರೈಮಾಸಿಕದಲ್ಲಿ 71ಕೋಟಿ ನಷ್ಟ ವರದಿ ಮಾಡಿದ ಮಲ್ಟಿಫ್ಲೆಕ್ಸ್‌ ದೈತ್ಯ ಪಿವಿಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಟಾಪ್ ಮಲ್ಟಿಪ್ಲೆಕ್ಸ್ ಆಪರೇಟರ್ PVR ಲಿಮಿಟೆಡ್ ಸೋಮವಾರ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಎರಡನೇ ತ್ರೈಮಾಸಿಕ ನಷ್ಟವನ್ನು ವರದಿ ಮಾಡಿದೆ. ಹಾಲಿವುಡ್‌ ಮತ್ತು ಬಾಲಿವುಡ್‌ ಚಿತ್ರಗಳ ನೀರಸ ಪ್ರದರ್ಶನವು ಪಿವಿಆರ್‌ ನಷ್ಟಕ್ಕೆ ಕೊಡುಗೆ ನೀಡಿದೆ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ PVR ನ ಏಕೀಕೃತ ನಿವ್ವಳ ನಷ್ಟವು ಒಂದು ವರ್ಷದ ಹಿಂದೆ ಸಾಂಕ್ರಾಮಿಕ ಪೀಡಿತ ಅವಧಿಯಲ್ಲಿನ 1.53 ಶತಕೋಟಿ ರೂಪಾಯಿಗಳಿಂದ 712.3 ಮಿಲಿಯನ್ ರೂಪಾಯಿಗಳಿಗೆ (71ಕೋಟಿ ಅಥವಾ $8.64 ಮಿಲಿಯನ್) ಕಡಿಮೆಯಾಗಿದೆ. ಕೆಲ ವಿಶ್ಲೇಷಕರ ಪ್ರಕಾರ ಈ ನಷ್ಟವು 99.2 ಮಿಲಿಯನ್‌ ರೂಪಾಯಿಗಳಷ್ಟಾಗಬಹುದು ಎಂದು ಅಂದಾಜಿಸಲಾಗಿತ್ತು.

ತ್ರೈಮಾಸಿಕದಲ್ಲಿ ಮಲ್ಟಿಫ್ಲೆಕ್ಸ್‌ ಗಳಿಗೆ ಜನರ ಬರುವಿಕೆ ಹಾಗೂ ಟಿಕೆಟ್‌ ದರದಲ್ಲಿನ ಕುಸಿತವು ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳ ದುರ್ಬಲ ಪ್ರದರ್ಶನದಿಂದ ಪ್ರಭಾವಿತವಾಗಿದೆ ಎಂದು ಪಿವಿಆರ್‌ ಫೈಲಿಂಗ್‌ ನಲ್ಲಿ ಹೇಳಿಕೊಂಡಿದೆ.

ಆದರೆ ಈಕುರಿತು PVR ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಬಿಜ್ಲಿ ಪ್ರತಿಕ್ರಿಯಿಸಿದ್ದು “ಈ ವರ್ಷ ಉತ್ತಮ ಕಂಟೆಂಟ್‌ ಗಳು ಸಾಲಿನಲ್ಲಿವೆ. ಅಲ್ಲದೇ ನಿಷ್ಟಾವಂತ ವೀಕ್ಷಕರಲ್ಲಿ ಸಿನಿಮಾ ಹೋಗುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸಲು ನಾವು ಜಾರಿಗೆ ತರುತ್ತಿರುವ ವಿವಿಧ ಉಪಕ್ರಮಗಳಿಂದ ಮುಂದಿನ ವ್ಯವಹಾರಿಕ ವರ್ಷದಲ್ಲಿ ಪೂರ್ಣ ಚೇತರಿಕೆಯ ಭರವಸೆ ನನಗಿದೆ” ಎಂದು ಹೇಳಿದ್ದಾರೆ.

ಪಿವಿಆರ್‌ ಮಲ್ಟಿಪ್ಲೆಕ್ಸ್ ಸರಣಿಯು ಎಲ್ಲಾ-ಸ್ಟಾಕ್ ಒಪ್ಪಂದದಲ್ಲಿ ಪ್ರತಿಸ್ಪರ್ಧಿ INOX ಲೀಸರ್‌ನೊಂದಿಗೆ ವಿಲೀನಗೊಳ್ಳಲು ಸಿದ್ಧವಾಗಿದೆ ಮತ್ತು 109 ನಗರಗಳಲ್ಲಿ 1,546 ಪರದೆಗಳೊಂದಿಗೆ ದೇಶದ ಅತಿದೊಡ್ಡ ಪ್ರದರ್ಶನ ಕಂಪನಿಯಾಗಿದೆ. ಈ ಆರ್ಥಿಕ ವರ್ಷದಲ್ಲಿ 125 ಹೊಸ ಪರದೆಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ.

ಕಾರ್ಯಾಚರಣೆಗಳ ಆದಾಯವು ವರ್ಷಕ್ಕೆ 470.7% ರಷ್ಟು ಜಿಗಿದು 6.87 ಶತಕೋಟಿ ರೂಪಾಯಿಗಳಿಗೆ ತಲುಪಿದೆ, ಆದರೆ ಇದು ಹಿಂದಿನ ತ್ರೈಮಾಸಿಕಕ್ಕಿಂತ 30ಶೇಕಡಾದಷ್ಟು ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!