ಅಂತ್ಯಕ್ರಿಯೆಗೂ ಬಂತು ಅಡ್ವಾನ್ಸ್‌ ಬುಕಿಂಗ್:‌ ಕರ್ಮಕಾಂಡದವರೆಗೆ ಎಲ್ಲಾ ಕಾರ್ಯ ಮಾಡುವ ಸ್ಟಾರ್ಟಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಮದುವೆ ಶುಭ ಸಮಾರಂಭಗಳನ್ನು ಮಾಡಲು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಗಳು ಇವೆ. ಆದರೆ ಇಲ್ಲೊಂದು ಕಂಪನಿ ಅಂತ್ಯಸಂಸ್ಕಾರ ಮಾಡುವ ಯೋಜನೆಗೆ ಸಿದ್ಧವಾಗಿದೆ.ಅಂತ್ಯಕ್ರಿಯೆಯಿಂದ ಹಿಡಿದು ಅಸ್ಥಿ ವಿಸರ್ಜನೆ ಮಾಡುವವರೆಗೆ ಎಲ್ಲ ಕೆಲವನ್ನು ತಾವೇ ಮಾಡುವುದಾಗಿ ಹೇಳಿ ಕಂಪನಿಯೊಂದು ಮುಂದೆ ಬಂದಿದೆ.

‘ಸುಖಾಂತ್ ಫ್ಯೂನರಲ್’ ಹೆಸರಿನ ಕಂಪನಿಯು ಇತ್ತೀಚೆಗೆ ಈ ಸೇವೆಗಳನ್ನು ಪ್ರಾರಂಭಿಸಿದೆ. ಈ ಕಂಪನಿಯು ತನ್ನ ಸೇವೆಗಳನ್ನು ಪ್ರಾರಂಭಿಸಲು ಒಂದು ಕಾರಣವಿದೆ. ಎರಡು ವರ್ಷಗಳ ಹಿಂದೆ ಕೋವಿಡ್‌ನಿಂದ ಹಲವರು ಸಾವನ್ನಪ್ಪಿದ್ದರು. ಆ ವೇಳೆ ಕುಟುಂಬದ ಸದಸ್ಯರಿಗೂ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಈ ಕೆಲಸ ಮಾಡಿವೆ. ಇನ್ನೂ ಕೆಲವರ ಅಂತಿಮ ಸಂಸ್ಕಾರ ಮಾಡಲು ಕುಟುಂಬಸ್ಥರು ಮುಂದೆ ಬರುತ್ತಿಲ್ಲ. ಕುಟುಂಬ ಸದಸ್ಯರು ದೂರ ವಿದೇಶದಲ್ಲಿರುವುದರಿಂದ ಅಥವಾ ಇತರ ಕಾರಣಗಳಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಅನಾಥವಾಗಿ ಕಾರ್ಪೊರೇಷನ್‌ ಅವರೇ ಸಂಸ್ಕಾರ ಮಾಡುವ ಸಂದರ್ಭ ಉಂಟಾಗುತ್ತಿದೆ. ಇವೆಲ್ಲವನ್ನು ತಪ್ಪಿಸಲು ಅಂತಹ ಯಾವುದೇ ತೊಂದರೆಯಾಗದಂತೆ ಎಲ್ಲವನ್ನೂ ತಾವೇ ನೋಡಿಕೊಳ್ಳುತ್ತೇವೆ ಅಂತಿದಾರೆ ‘ಸುಖಾಂತ್ ಫ್ಯೂನರಲ್ʼ

ಶವಸಂಸ್ಕಾರ ಮಾಡಲು ಸಾಧ್ಯವಾಗದವರು ಹಣವನ್ನು ಪಾವತಿಸಿದರೆ ಸಾಕು ಎಲ್ಲವನ್ನೂ ಈ ಕಂಪನಿಯೇ ನೋಡಿಕೊಳ್ಳುತ್ತದೆ. ಅವರ ಸಂಪ್ರದಾಯದಂತೆ ಅಂತ್ಯಕ್ರಿಯೆಯ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತದೆ. ಮೃತದೇಹವನ್ನು ಮನೆಯಿಂದ ಕೊಂಡೊಯ್ಯುವುದು, ಅಂತ್ಯಕ್ರಿಯೆಗಳನ್ನು ಏರ್ಪಡಿಸುವುದು, ಪುರೋಹಿತರು ಮತ್ತು ಸಂಬಂಧಿಕರಿಗೆ ವ್ಯವಸ್ಥೆ ಮಾಡುವುದು ಮತ್ತು ಅಗತ್ಯವಿದ್ದರೆ ಅಸ್ಥಿ ಬಿಡುವುದು ಮುಂತಾದ ಚಟುವಟಿಕೆಗಳನ್ನು ಕಂಪನಿಯು ಕೈಗೊಳ್ಳುತ್ತದೆ. ಪ್ರತಿಯೊಂದು ರೀತಿಯ ಸೇವೆಗೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಗರಿಷ್ಠ 37,500 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಪ್ರಸ್ತುತ, ಈ ಕಂಪನಿಯು ಮುಂಬೈ ಮತ್ತು ನವಿ ಮುಂಬೈನಲ್ಲಿ ಸೇವೆಗಳನ್ನು ಒದಗಿಸುತ್ತದೆ. ಆದರೆ, ಶೀಘ್ರದಲ್ಲೇ ದೇಶಾದ್ಯಂತ ತಮ್ಮ ಸೇವೆಯನ್ನು ವಿಸ್ತರಿಸುವುದಾಗಿ ಸಂಘಟಕರು ತಿಳಿಸಿದ್ದಾರೆ. ಈ ಕಾರ್ಯಕ್ರಮಗಳಿಗಾಗಿ ಕಂಪನಿಯು ವಿವಿಧ ಪ್ಯಾಕೇಜ್‌ಗಳನ್ನು ಸಹ ಘೋಷಿಸಿದೆ.

ಪೂರ್ವ ಯೋಜನೆಗೆ ರೂ.40,000 ವರೆಗೆ ಶುಲ್ಕ ವಿಧಿಸುತ್ತದೆ. ಅಂತಿಮ ವಿಧಿವಿಧಾನಗಳಿಗೆ ಮುಂಗಡ ಬುಕ್ಕಿಂಗ್ ಕೂಡ ಮಾಡಬಹುದು. ಅವರು ಹೇಗೆ ಬೇಕು ಎಂದು ಮೊದಲೇ ನಿರ್ಧರಿಸಿದರೆ, ಅದರಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕೊನೆಯ ಪ್ರವಾಸ ಹೇಗಿರಬೇಕು ಎಂದು ಹೇಳಿದರೆ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡುತ್ತಾರೆ. ಅಗತ್ಯವಿದ್ದರೆ ಪತ್ರಿಕಾ ಪ್ರಕಟಣೆಗಳನ್ನು ಸಹ ನೀಡಲಾಗುತ್ತದೆ. ಇಂತಹ ವಿಚಿತ್ರ ಸ್ಟಾರ್ಟಪ್ ನೀಡುವ ಸೇವೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!