Sunday, December 3, 2023

Latest Posts

ಕನ್ಯಾ ರಾಶಿಯ ಕನ್ಯೆ ಬಗ್ಗೆ ತಿಳಿದುಕೊಳ್ಳಬೇಕಾ? ಮಿಸ್ ಪರ್ಫೆಕ್ಟ್ ಅಂತೆ ಈ ರಾಶಿಯ ಹುಡುಗಿ!

ಸಾಮಾನ್ಯವಾಗಿ ಪ್ರತಿ ರಾಶಿಯಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಲಕ್ಷಣಗಳು ಇರುತ್ತವಂತೆ. ಇಂದು ಕನ್ಯಾ ರಾಶಿಯಲ್ಲಿ ಹುಟ್ಟಿದ ಹುಡುಗಿಗೆ ಯಾವ ರೀತಿ ಲಕ್ಷಣಗಳಿವೆ ತಿಳಿದುಕೊಳ್ಳೋಣ ಬನ್ನಿ..

  1. ಯಾವ ಕೆಲಸವನ್ನೂ ಅರ್ಧ ಮಾಡೋದಿಲ್ಲ ಅವಳು ಮಿಸ್ ಪರ್ಫೆಕ್ಟ್.
  2. ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳೋಕೆ ಸಾಧ್ಯವೇ ಇಲ್ಲ, ಇವರೊಂಥರಾ ಹ್ಯೂಮನ್ ಲೈ ಡಿಟೆಕ್ಟರ್ಈ
  3. ಕೆ ಜಾಣೆ, ಹಾಗೂ ವ್ಯಂಗ್ಯವಾಗಿ ಮಾತನಾಡೋದ್ರಲ್ಲಿ ಎತ್ತಿದ ಕೈ
  4. ಕೆಲಸದಲ್ಲಿ ಶ್ರದ್ಧೆ ಜಾಸ್ತಿ, ಹಿಡಿದ ಕೆಲಸ ಮುಗಿಯೋವರೆಗೂ ಎದ್ದೇಳೋದಿಲ್ಲ
  5. ಒಬ್ಬರ ಮೇಲೆ ಡಿಪೆಂಡ್ ಆಗೋದು ಈಕೆಗೆ ಹಿಡಿಸೋದಿಲ್ಲ. ಆರ್ಥಿಕವಾಗಿಯೂ ಹೌದು, ಮಾನಸಿಕವಾಗಿಯೂ ಹೌದು.
  6. ತಲೆಯಲ್ಲಿ ಓಡೋದನ್ನೇ ಬಾಯಲ್ಲಿ ಹೇಳ್ತಾರೆ. ಹಿಂದೆ ಒಂದು ಮುಂದೆ ಒಂದು ಗುಣವೇ ಇಲ್ಲ.
  7. ನೊಡೋದಕ್ಕೆ ಭಾರೀ ಬೋಲ್ಡ್ ಆಗಿ ಕಾಣೋ ಇವಳು ಒಳಗೊಳಗೆ ಹೆದರುತ್ತಾಳೆ, ಆದ್ರೆ ತೋರಿಸಿಕೊಳ್ಳೋದಿಲ್ಲ.
  8. ಇವರಿಗೆ ಮೋಟಿವೇಟ್ ಮಾಡೋಕೆ ಬೇರೆ ಜನ ಬೇಕಿಲ್ಲ. ತನಗೆ ತಾನೇ ಮೋಟಿವೇಟ್ ಮಾಡ್ಕೋತಾರೆ
  9. ಇವರು ತುಂಬಾ ಮೆಸ್ಸಿ. ಆದರೆ ಕ್ಲೀನ್ ಮಾಡೋಕೆ ನಿಂತರೆ ಎಲ್ಲವೂ ಸರಿಯಾಗೋ ವರೆಗೆ ಸುಸ್ತಾಗೋದಿಲ್ಲ.
  10. ಸಮಸ್ಯೆ ಬಿಡಿಸೋ ಶಕ್ತಿ ಇರೋ ಇವಳಿಗೆ ಗಣಿತದ ಲೆಕ್ಕ ನಿಜಕ್ಕೂ ಕಷ್ಟ
  11. ನೀವು ಮಾತಲ್ಲೇ ಮನೆ ಕಟ್ಟಿದರೆ ಈಕೆಗೆ ಹಿಡಿಸೋದಿಲ್ಲ. ಗೆಲುವು ಇಲ್ಲವಾದ್ರೂ ಪರವಾಗಿಲ್ಲ ಪರಿಶ್ರಮ ಕಾಣಬೇಕು.
  12. ಪ್ರೀತಿಸಿದ ಹುಡುಗ ತುಂಬಾನೇ ಲಕ್ಕಿ, ಪ್ರೀತಿಯಲ್ಲಿ ಕಲ್ಮಶ ಇಲ್ಲ. ಮನಸ್ಸು ತುಂಬಾ ಇಷ್ಟಪಡ್ತಾಳೆ.
  13. ಅತಿಯಾಗಿ ಯೋಚನೆ ಮಾಡೋದನ್ನು ಇವಳನ್ನು ನೋಡಿ ಕಲೀಬೇಕು, ಬೇಕಾಗಿದ್ದು ಬೇಡವಾದ್ದು ಎಲ್ಲವನ್ನೂ ತಲೆಗೆ ತುಂಬಿಕೊಂಡು ಕಸದಬುಟ್ಟಿ ಮಾಡಿಕೊಳ್ತಾಳೆ.
  14. ನಂಬಿಕೆಗೆ ಅರ್ಹ ವ್ಯಕ್ತಿ. ಇನ್ನೊಬ್ಬರಿಗೆ ಹೇಳಬೇಡ ಸೀಕ್ರೆಟ್ ಎಂದರೆ ಅದನ್ನು ಒಪ್ಪಿ ಅಂತೆಯೇ ನಡೀತಾರೆ.
  15. ಬುದ್ಧಿವಂತೆ ಈಕೆ. ಓದುವುದರಲ್ಲಿ ಸದಾ ಮುಂದು.
  16. ಪಾರ್ಟಿ ಮಾಡೋದು ಈಕೆಗೆ ಅಷ್ಟಕಷ್ಟೆ ಬೇಕಾದರೆ ಟ್ರಿಪ್ ಮಾಡೋಕೆ ಬರ‍್ತಾರೆ.
  17. ಇವರು ಓಲ್ಡ್ ಸ್ಕೂಲ್, ಲವ್ ಲೆಟರ್, ಮನಸ್ಸಿನ ಮಾತು, ಒಳ್ಳೆ ಪುಸ್ತಕ, ಒಂದು ಕಪ್ ಕಾಫಿ ಇವಳಿಗಿಷ್ಟ.
  18. ಇವರನ್ನು ದಿಂಬು ಎಂದುಕೊಳ್ಳಿ ಎಷ್ಟಾದರೂ ಇವರ ಎದುರು ಕುಳಿತು ಮಾತನಾಡಿ. ಎಲ್ಲವನ್ನೂ ಕೇಳಿಸಿಕೊಳ್ತಾರೆ.
  19. ದುಡ್ಡು ಉಳಿಸೋದು ಇವಳಿಗೆ ಕಷ್ಟ. ಕೈ ತೂತು ದೊಡ್ಡದಾಗಿಯೇ ಇರುತ್ತದೆ. ಆದರೆ ಒಮ್ಮೆ ಮನಸ್ಸು ಮಾಡಿದರೆ ಸೇವಿಂಗ್ಸ್ ಮಾಡ್ತಾರೆ.
  20. ಇವರ ಜೋಕ್ಸ್‌ಗೆ ನಗೋದೆ ಇರೋಕೆ ಸಾಧ್ಯವೇ ಇಲ್ಲ. ಒಲ್ಳೆಯ ಸೆನ್ಸ್ ಆಫ್ ಹ್ಯೂಮರ್ ಇದೆ. ಹಾಗಾಗಿ ಇವರಿಗೆ ಸ್ನೇಹಿತರೂ ಹೆಚ್ಚು

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!