Friday, June 9, 2023

Latest Posts

ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿಯಲ್ಲಿ ಬೆಂಕಿ ರುದ್ರ ನರ್ತನ: ಯುವಕ ಸುಟ್ಟು ಕರಕಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂಧೇರಿ ಪೂರ್ವದಲ್ಲಿರುವ ಸಾಕಿ ನಾಕಾ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ನಸುಕಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ಅಂಗಡಿಯಲ್ಲಿ ಬೆಂಕಿ ವ್ಯಾಪಿಸಿದ್ದು, ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಸುಟ್ಟ ಗಾಯಗಳಿದ್ದ ರೋಗಿಯನ್ನು ಮುಂಬೈನ ರಾಜವಾಡಿ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದಿದೆ. “ರಾಕೇಶ್ ಗುಪ್ತಾ ಎಂಬ 22 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ” ಎಂದು ರಾಜವಾಡಿ ಆಸ್ಪತ್ರೆಯ ಡಾ ವೈಕುಲೆ ಸ್ಪಷ್ಟಪಡಿಸಿದರು.

ಮಾಹಿತಿ ಪ್ರಕಾರ ಮೃತ ರಾಕೇಶ್ ಗುಪ್ತಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಿಎಂಸಿ ಅಧಿಕಾರಿಗಳ ಪ್ರಕಾರ, ಬೆಂಕಿಯು ಎಲೆಕ್ಟ್ರಿಕ್ ವೈರಿಂಗ್‌ಗಳು, ಎಲೆಕ್ಟ್ರಿಕ್ ಅಳವಡಿಕೆಗಳು ಮತ್ತು ಅಂಗಡಿಯೊಳಗೆ ದೊಡ್ಡ ಪ್ರಮಾಣದಲ್ಲಿ ಆವರಿಸಿದೆ.

ಜೆಸಿಬಿ ಸಹಾಯದಿಂದ ಕಟ್ಟಡದ ಮುಂಭಾಗವನ್ನು ಕೆಡವುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!