Tuesday, May 30, 2023

Latest Posts

WPL-2023 | ರೋಚಕ ಪಂದ್ಯ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದಿದ್ದು, ಮೊದಲ ಚಾಂಪಿಯನ್ಸ್ ಆಗಿ ಮುಂಬೈ ಇಂಡಿಯನ್ಸ್ ತಂಡ ಹೊರಹೊಮ್ಮಿದೆ.

ಟ್ರೋಫಿ ಎತ್ತಿ ಸಂಭ್ರಮಿಸುತ್ತಿರುವ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಆಟಗಾರ್ತಿಯರು.ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗಿದೆ. ರೋಚಕ ಪಂದ್ಯ ವೀಕ್ಷಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಖುಷಿಯಲ್ಲಿ ಕುಪ್ಪಳಿಸಿದ್ದಾರೆ.

ಟ್ರೋಫಿ ಜೊತೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್.ಸಾಮಾಜಿಕ ಜಾಲತಾಣಗಳಲ್ಲಿಯೂ ಮಹಿಳಾಪಡೆಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಕಡೆಯ ಓವರ್‌ವರೆಗೂ ಯಾರಾದರೂ ಚಾಂಪಿಯನ್ ಆಗಬಹುದು ಎನ್ನುವಂತಿದ್ದ ಪಂದ್ಯದಲ್ಲಿ ಕಡೆಗೆ ಮುಂಬೈ ಗೆಲುವಿನ ನಗೆ ಬೀರಿದೆ.

ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧ ಎಂಐ (DC vs MI) 7 ವಿಕೆಟ್​ಗಳಿಂದ ಗೆದ್ದು ಬೀಗಿತು.ಗೆದ್ದ ತಂಡಕ್ಕೆ ಟ್ರೋಫಿ ಹಾಗೂ ಆರು ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ರನ್ನರ್ ಅಪ್ ಆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೂರು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!