ಡ್ರೋನ್ ಮತ್ತು ಮೈಕ್ರೋ ಲೈಟ್ ಏರ್‌ಕ್ರಾಫ್ಟ್‌ಗಳ ಹಾರಾಟಕ್ಕೆ ಮುಂಬೈ ಪೊಲೀಸರು ಬ್ರೇಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರೋನ್‌ಗಳು ಮತ್ತು ಇತರ ರಿಮೋಟ್ ಕಂಟ್ರೋಲ್ ಅಥವಾ ಮೈಕ್ರೋ-ಲೈಟ್ ಏರ್‌ಕ್ರಾಫ್ಟ್‌ಗಳನ್ನು ನಗರದಲ್ಲಿ 30 ದಿನಗಳ ಕಾಲ ಹಾರಿಸಬಾರದೆಂದು ಸೆಕ್ಷನ್ 144 ರ ಅಡಿಯಲ್ಲಿ ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಂಡಿದ್ದಾರೆ. ಪೊಲೀಸ್ ಅಧಿಸೂಚನೆಯ ಪ್ರಕಾರ, ಆದೇಶವು ನವೆಂಬರ್ 13 ರಿಂದ ಡಿಸೆಂಬರ್ 12 ರ ನಡುವೆ ಜಾರಿಯಲ್ಲಿರುತ್ತದೆ.

ಭಯೋತ್ಪಾದಕರು ಮತ್ತು ದೇಶವಿರೋಧಿ ಶಕ್ತಿಗಳು ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋ-ಲೈಟ್ ಏರ್‌ಕ್ರಾಫ್ಟ್, ವೈಮಾನಿಕ ಕ್ಷಿಪಣಿಗಳು ಅಥವಾ ಪ್ಯಾರಾಗ್ಲೈಡರ್‌ಗಳ ಮೂಲಕ ವಿವಿಐಪಿಗಳನ್ನು ಗುರಿಯಾಗಿಸುವುದರ ಜೊತೆಗೆ ಸಾರ್ವಜನಿಕ ಜೀವಕ್ಕೆ ಹಾನಿ ಮಾಡುವುದು,  ಸಾರ್ವಜನಿಕ ಆಸ್ತಿಯನ್ನು ನಾಶ ಮತ್ತು ತೊಂದರೆ ಉಂಟುಮಾಡುವ ಸಾಧ್ಯತೆಯಿದೆ. ಮುಂಬೈ ಪೊಲೀಸ್ ಕಮಿಷನರೇಟ್ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಸಂಭವನೀಯ ವಿಧ್ವಂಸಕತೆಯನ್ನು ತಡೆಗಟ್ಟಲು ನಿರ್ಬಂಧಗಳು ಅಗತ್ಯವೆಂದು ಹೇಳಿದೆ. ಮುಂದಿನ 30 ದಿನಗಳ ಕಾಲ ವೈಮಾನಿಕ ಹೊರತುಪಡಿಸಿ ಮುಂಬೈ ಪೊಲೀಸ್ ಕಮಿಷನರೇಟ್ ಪ್ರದೇಶದ ವ್ಯಾಪ್ತಿಯಲ್ಲಿ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋ-ಲೈಟ್ ಏರ್‌ಕ್ರಾಫ್ಟ್, ಪ್ಯಾರಾಗ್ಲೈಡರ್‌ಗಳು, ಪ್ಯಾರಾ ಮೋಟಾರ್‌ಗಳು, ಮತ್ತು ಖಾಸಗಿ ಹೆಲಿಕಾಪ್ಟರ್‌ಗಳ ಹಾರುವ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!