ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್8 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಈ ಮೊತ್ತ ಚೇಸ್ ಮಾಡಲು ಗುಜರಾತ್ ಟೈಟಾನ್ಸ್ ವಿಫಲವಾಗಿತ್ತು. ಇದೀಗ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡನಾಯಕ ರೋಹಿತ್ ಶರ್ಮಾ ಮತ್ತೆ ನಿರಾಸೆ ಅನುಭವಿಸಿದರು. 10 ಎಸೆತದಲ್ಲಿ 11 ರನ್ ಸಿಡಿಸಿ ಔಟಾದರು. ಇತ್ತ ಇಶಾನ್ ಕಿಶನ್ 15 ರನ್ ಸಿಡಿಸಿ ನಿರ್ಗಮಿಸಿದರು.
ಬಳಿಕ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಯಾದವ್ 20 ಎಸೆತದಲ್ಲಿ 33 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ 23 ಎಸೆತದಲ್ಲಿ 44 ರನ್ ಸಿಡಿಸಿದ ಕ್ಯಾಮರೂನ್ ಗ್ರೀನ್ ವಿಕೆಟ್ ಪತನಗೊಂಡಿತು. ಇವರಿಬ್ಬರ ವಿಕೆಟ್ ಪತನದಿಂದ ಮುಂಬೈ ಇಂಡಿಯನ್ಸ್ ಮತ್ತೆ ಕುಸಿತ ಕಂಡಿತು.
ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಹೋರಾಟ ನೀಡಿದರು. ಆದರೆ ಟಿಮ್ ಡೇವಿಡ್ 13 ರನ್ ಸಿಡಿಸಿ ಔಟಾದರು. ತಿಲಕ್ ವರ್ಮಾ 26 ರನ್ ಕಾಣಿಕೆ ನೀಡಿದರು. ಇತ್ತ ನೆಹಾಲ್ ವಧೇರಾ 23 ರನ್ ಸಿಡಿಸಿದರು. ಕ್ರಿಸ್ ಜೋರ್ಡಾನ್ 4 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿತು.