September 17, 2026
Thursday, September 17, 2026
spot_img

ಪುಣೆಯಲ್ಲಿ ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣ ಬಳಿ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು ಸೋಮವಾರ ರಾತ್ರಿ ಹಳಿತಪ್ಪಿದೆ.

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ನೈಋತ್ಯ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು(ಸಂಖ್ಯೆ 22225) ಪ್ಲಾಟ್‌ಫಾರ್ಮ್ ಬಳಿ ಕ್ರಾಸಿಂಗ್ ವೇಳೆ ಹಳಿ ತಪ್ಪಿದೆ.

ಅದೃಷ್ಟವಶಾತ್ ಅನಾಹುತವೊಂದು ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !