500 ರೂಪಾಯಿ ವಾಪಾಸ್‌ ಕೇಳಿದ್ದಕ್ಕೆ ಮರ್ಡರ್‌: ಐವರು ಆರೋಪಿಗಳು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನೊಬ್ಬನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ. ಮೊಹಮ್ಮದ್ ಅಲಿ ಮೊರಬ ಎಂಬಾತ ಚಾಕು ಇರಿತಕ್ಕೊಳಗಾದ ಯುವಕ.

ಜಮೀರ್​ ಎಂಬಾತ ಮೊಹಮದ್​ನಿಂದ 500 ರೂ. ಪಡೆದಿದ್ದ. ಅದನ್ನು ಕೊಡುವ ನೆಪದಲ್ಲಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ರೆಹಮತ್ ನಗರದ ವಾಲಿಬಾಲ್ ಗ್ರೌಂಡ್‌ಗೆ ಕರೆಸಿಕೊಂಡಿದ್ದ. ಆಗ ಮಹ್ಮದ್ ಮತ್ತು ಜಮೀರ್​ ನಡುವೆ ಗಲಾಟೆಯಾಗಿದೆ. ಜಮೀರ್​ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್, ಅಸ್ಲಾಂ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಸ್ಲಾಂ ಚಾಕುವಿನಿಂದ ಮೊಹಮದ್​ ಬೆನ್ನು, ಎದೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಮೊಹಮದ್​ ಮೊರಬನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಜಮೀರ್​, ಅಸ್ಲಾಂ, ಸಾಧಿಕ್​, ಅಲ್ತಾಫ್, ಹಾಗೂ ಇರ್ಫಾನ್‌ನನ್ನು ಬಂಧಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!