ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿಯಾಗಿದೆ. ಪೊಲಾರಿಸ್ ಡಾನ್ ಯೋಜನೆಯಡಿ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಮರಳಿ ಆಗಮಿಸಿದ್ದಾರೆ.
ಇಬ್ಬರು ನಾಸಾ ಪೈಲಟ್‌ಗಳು, ಒಬ್ಬ ಸ್ಪೇಸ್‌ಎಕ್ಸ್ ಉದ್ಯೋಗಿ ಹಾಗೂ ಬಿಲಿಯನೇರ್ ಜರೇಡ್ ಐಸಾಕ್‌ಮನ್ ಈ ಖಾಸಗಿ ಬಾಹ್ಯಕಾಶ ನಡಿಗೆ ತಂಡದಲ್ಲಿದ್ದರು. ಇವರನ್ನು ಹೊತ್ತಿದ್ದ ನೌಕೆ ಯಶಸ್ವಿಯಾಗಿ ಮೆಕ್ಸಿಕೋ ಕೊಲ್ಲಿಯಲ್ಲಿ ಇಳಿದಿದೆ. ಭೂಮಿಯಿಂದ ಸುಮಾರು 740 ಕಿ.ಮೀ. ದೂರದಲ್ಲಿ ಯಶಸ್ವಿಯಾಗಿ ಬಾಹ್ಯಕಾಶ ನಡಿಗೆ ನಡೆದಿತ್ತು.
ಸ್ಪೇಸ್ ಎಕ್ಸ್ ಮಾಲೀಕ ಎಲೋನ್ ಮಸ್ಕ್ ಎಕ್ಸ್‌ನಲ್ಲಿ ನಾಲ್ವರ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ 18 ವರ್ಷದ ಹಿಂದೆ ಫಾಲ್ಕನ್ ಫೈಟ್ ರಾಕೆಟ್ ಫೇಲ್ ಆದ ಸಂದರ್ಭದ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.