Wednesday, March 29, 2023

Latest Posts

ಮಲಯಾಳಂ ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಕೊಲೆ: ಮರದ ಮೇಲೆ ಮಹಿಳೆಯ ತಲೆ ಬುರುಡೆ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ನಲ್ಲಿ ತೆರೆಕಂಡ ಕೋಲ್ಡ್ ಕೇಸ್ ಸಿನಿಮಾದ ಮಾದರಿಯಲ್ಲೇ ರಾಜ್ಯ ರಾಜಧಾನಿಯ ಬೆಂಗಳೂರಿನ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ.

ಸುಮಾರು 6 ತಿಂಗಳಿಂದ ಮರದ ಕೊಂಬೆಯಲ್ಲಿ ನೇತಾಡುತಿದ್ದ ತಲೆ ಬುರುಡೆ ಪತ್ತೆಯಾಗಿದೆ. ನಿನ್ನೆ (ಫೆ.2) ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯ ಶವ ಎಂಬ ಶಂಕೆ ವ್ಯಕ್ತವಾಗಿದೆ. ಹುಳಿಮಾವು ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಇದೀಗ 7 ತಿಂಗಳ ಹಿಂದೆ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬಳು ನಾಪತ್ತೆ ಪ್ರಕರಣ ತನಿಖೆಯಲ್ಲಿದೆ. ಹೀಗಾಗಿ ಅದೇ ಮಹಿಳೆಯ ಶವ ಇದು ಎನ್ನುವ ಅನುಮಾನ ವ್ಯಕ್ತವಾಗಿದೆ.

ನಿನ್ನೆ ಬೆಳಗ್ಗೆ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರುಮಾಡಿದ್ವಿ. ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಅಲ್ಲಿ ಸಿಕ್ಕಿರುವ ವಸ್ತುಗಳು ಎಲ್ಲ ವಸ್ತುಗಳು ಮ್ಯಾಚ್ ಮಾಡಲಾಗಿದ್ದು ಮಹಿಳೆಯದೆ ಶವ ಎಂಬುದು ಗೊತ್ತಾಗಿದೆ. ಆದರೂ ನಾವು ಅಸ್ಥಿಪಂಜರದ ಡಿಎನ್​ಎ, ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನು ಪಡೆದುಕೊಳ್ಳಲಿದ್ದೇವೆ ಎಂದು ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!