Saturday, February 4, 2023

Latest Posts

ದೇವಸ್ಥಾನದಲ್ಲಿಯೇ ಮರ್ಡರ್: ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ

ಹೊಸದಿಗಂತ ವರದಿ ವಿಜಯಪುರ:

ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪರಸಪ್ಪ ಗುಂಡಕರಜಗಿ (55) ಹತ್ಯೆಯಾಗಿರುವ ದುರ್ದೈವಿ.

ಬಸವನಬಾಗೇಬಾಡಿ ತಾಲೂಕಿನ ಕಾಮನಕೇರಿ ನಿವಾಸಿಯಾದ ಪರಸಪ್ಪ ಕೆಲವು ದಿನಗಳಿಂದ ಅಮೋಘಸಿದ್ದ ಮಂದಿರದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದನು. ಆದರೆ, ಯಾರೋ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!