ಹೊಸದಿಗಂತ ವರದಿ,ವಿಜಯಪುರ:
ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಅಮೃತ ಡಾಬಾ ಹತ್ತಿರ ನಡೆದಿದೆ.
ಮೃತಪಟ್ಟವನನ್ನು ಮೂಲತಃ ಸೊಲ್ಲಾಪುರ ನಿವಾಸಿಯಾದ ನಿತೀನ್ ಸಂತೋಷ ಮಾಶಾಳಕರ ಎಂದು ಗುರುತಿಸಲಾಗಿದೆ.
ನಿತೀನ್ ಮಾಶಾಳಕರ ಈತ ಜಿಲ್ಲೆಯ ಇಂಡಿಯಲ್ಲಿ ಮಾವನ ಮನೆಯಲ್ಲಿ ವಾಸವಾಗಿದ್ದ, ನಿನ್ನೆ ತಡರಾತ್ರಿ ಕುಡಿದ ನಶೆಯಲ್ಲಿ ದುಷ್ಕರ್ಮಿಗಳೊಂದಿಗೆ ಮಾತಿಗೆ ಮಾತು ಬೆಳೆದಿದ್ದು, ಕೊಲೆಯಲ್ಲಿ ಜಗಳ ಅಂತ್ಯಗೊಂಡಿದೆ.
ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.