ವಾಯುಪಡೆಯ ನಿವೃತ್ತ ಅಧಿಕಾರಿ, ಪತ್ನಿ ಕೊಲೆ: ಹಣಕ್ಕಾಗಿ ಕೃತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಯುಪಡೆಯ ನಿವೃತ್ತ ಅಧಿಕಾರಿ ಹಾಗೂ ಅವರ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ವಿಲ್ಲಾ ಒಂದರಲ್ಲಿ ಹತ್ಯೆ ಮಾಡಿದ್ದು, ಹಂತಕ ತಲೆಮರೆಸಿಕೊಂಡಿದ್ದಾನೆ.
ರಘು ರಾಜನ್ ಹಾಗೂ ಆಶಾ ತಮಿಳುನಾಡು ಮೂಲದವರಾಗಿದ್ದು, ಆರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ದಂಪತಿಯ ಮಕ್ಕಳು ದೆಹಲಿಯಲ್ಲಿದ್ದು, ದಂಪತಿ ಮಾತ್ರ ಬಿಡದಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಇದ್ದರು.

ರಾಜನ್ ಅವರ ಪುತ್ರ ತಂದೆ-ತಾಯಿಗೆ ಬಹಳಷ್ಟು ಬಾರಿ ಕರೆ ಮಾಡಿದ್ದು, ಯಾರೂ ಕರೆ ಸ್ವೀಕರಿಸದ ಕಾರಣ ಸೆಕ್ಯುರಿಟಿಗೆ ಕರೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ವಿಲ್ಲಾ ಬಳಿ ಹೋಗಿ ನೋಡಿದಾಗ ಮನೆಯ ಬಾಗಿಲು ಹಾಕಿದೆ. ಇತ್ತೀಚೆಗಷ್ಟೇ ಮನೆಯ ನಾಯಿಯನ್ನು ನೋಡಿಕೊಳ್ಳಲು ಕೆಲಸಕ್ಕೆ ವ್ಯಕ್ತಿಯೊಬ್ಬ ಸೇರಿದ್ದ. ಆತನನ್ನು ವಿಚಾರಿಸಿದಾಗ ಅವರು ಮನೆಯಲ್ಲಿ ಇಲ್ಲ, ಎಲ್ಲಿಗೋ ಹೋದರು ಎಂದು ಹೇಳಿದ್ದಾನೆ.

ತದನಂತರ ರಾಜನ್ ಪುತ್ರ ಮನೆಯೊಳಗೆ ಹೋಗಿ ನೋಡುವಂತೆ ಒತ್ತಾಯಿಸಿದ್ದು, ಭದ್ರತಾ ಸಿಬ್ಬಂದಿ ಮನೆಗೆ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ದಂಪತಿ ಮೃತದೇಹ ಕಂಡಿದೆ. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಆಭರಣಗಳು ಕಳವಾಗಿದೆ. ನಾಯಿ ನೋಡಿಕೊಳ್ಳಲು ಬಂದ ವ್ಯಕ್ತಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಆತನೇ ಕೊಲೆ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!