ಮದುವೆ ಸಂಭ್ರಮದಲ್ಲೇ ಪ್ರೇಯಸಿಯ ಹತ್ಯೆ: ದೆಹಲಿ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ ಲಿವ್-ಇನ್ ಸಂಗಾತಿಯ ಹತ್ಯೆ ಪ್ರಕರಣ ಸಂಬಂಧ ಅನೇಕ ಆತಂಕಕಾರಿ ಮಾಹಿತಿ ಹೊರಬರುತ್ತಿದ್ದು, ನಾಲ್ಕು ವರ್ಷದ ತನ್ನ ಲಿವ್-ಇನ್ ಸಂಗಾತಿ ನಿಕ್ಕಿಯನ್ನು ಸಾಹಿಲ್ ಎಂಬಾತ ತನ್ನ ಮದುವೆಯ ದಿನ ಕೊಂದಿದ್ದಾನೆ.

ಕೊಲೆಯಾದ ದಿನವೇ ಸಾಹಿಲ್ ನಿಕ್ಕಿ ಮೊಬೈಲ್‌ನಲ್ಲಿದ್ದ ತನ್ನ ಚಾಟ್‌ಗಳನ್ನು ಡಿಲೀಟ್ ಮಾಡಿದ್ದನು.

ಸಾಹಿಲ್ ತನ್ನೊಂದಿಗಿದ್ದುಕೊಂಡು ನಿಶ್ಚಿತಾರ್ಥವಾಗಿದ್ದಾನೆ. ಜೊತೆಗೆ ವಿವಾಹ ಕೂಡ ಮಾಡಿಕೊಳ್ಳುತ್ತಿದ್ದಾನೆ ಎಂದು ನಿಕ್ಕಿಗೆ ಕೊಲೆಯಾದ ದಿನವೇ ಗೊತ್ತಾಗಿತ್ತು. ಹೀಗಾಗಿ ನಿಕ್ಕಿ ಸಾಹಿಲ್ ಗೆಹ್ಲೋಟ್ ನೊಂದಿಗೆ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.

24 ವರ್ಷದ ಸಾಹಿಲ್ ಗೆಹ್ಲೋಟ್ ಫೆಬ್ರವರಿ 9 ರಂದು ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ದಿನ ಸ್ನೇಹಿತರೊಂದಿಗೆ ಗಂಟೆಗಳ ಕಾಲ ನೃತ್ಯ ಮಾಡಿದ್ದರು. ಮರುದಿನ ಮದುವೆಯ ದಿನ ನಿಕ್ಕಿ ಯಾದವ್ ಗೆ ಸಾಹಿಲ್ ಮದುವೆಯಾಗುತ್ತಿದ್ದಾನೆ ಇದರಿಂದ ತನ್ನನ್ನು ಮದುವೆಯಾಗದೇ ಇದ್ದರೆ ಎಲ್ಲರಿಗೂ ವಿಚಾರ ತಿಳಿಸುವುದಾಗಿ ನಿಕ್ಕಿ ಬೆದರಿಕೆ ಹಾಕಿದ್ದಾಳೆ. ಇದರಿಂದಾಗಿ ಸಾಹಿಲ್ ಮೊಬೈಲ್ ಕೇಬಲ್‌ನಿಂದ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಕುಟುಂಬ ಒಡೆತನದ ರೆಸ್ಟೋರೆಂಟ್ ಫ್ರಿಡ್ಜ್‌ನಲ್ಲಿ ಇರಿಸಿದ್ದನು.

ಇತ್ತ 23 ವರ್ಷದ ನಿಕ್ಕಿ ಯಾದವ್ ಅವರು ಫೆಬ್ರವರಿ 9 ರಂದು ತಮ್ಮ ಬಾಡಿಗೆ ಮನೆಯಲ್ಲಿ ಭದ್ರತಾ ದೃಶ್ಯಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ತನ್ನ ನಿಶ್ಚಿತಾರ್ಥದ ನಂತರ, ಸಾಹಿಲ್ ತನ್ನ ಸೋದರಸಂಬಂಧಿಯ ಕಾರನ್ನು ತೆಗೆದುಕೊಂಡು ರಾತ್ರಿ 1 ಗಂಟೆ ಸುಮಾರಿಗೆ ನಿಕ್ಕಿಯ ಮನೆಗೆ ತೆರಳಿದ್ದನು. ಮುಂಜಾನೆ 5 ಗಂಟೆಯ ಸುಮಾರಿಗೆ ಅವರು ಹೊರಟು ಹೋಗುತ್ತಿರುವುದು ಕಂಡುಬಂದಿದೆ. ಅದೇ ದಿನ ಇಬ್ಬರು ಅದೇ ಕಾರಿನಲ್ಲಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಗೋವಾಕ್ಕೆ ರೈಲು ಹಿಡಿಯಲು ಹೋದರು.ನಿಕ್ಕಿ ಯಾದವ್ ಸಾಹಿಲ್ ಜೊತೆ ಗೋವಾಕ್ಕೆ ಹೋಗಲು ಬಯಸಿದ್ದರು.

ಆದರೆ ಅವರು ಟಿಕೆಟ್ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಹಿಮಾಚಲ ಪ್ರದೇಶದ ಯಾವುದೇ ಬೆಟ್ಟದ ಪಟ್ಟಣಕ್ಕೆ ಪ್ರವಾಸವನ್ನು ಬುಕ್ ಮಾಡಲು ಬಸ್ ನಿಲ್ದಾಣಕ್ಕೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಾಹಿಲ್ ನಿಕ್ಕಿಯನ್ನು ಬಿಡಲು ಯೋಜಿಸಿದ್ದರು ಮತ್ತು ಒಟ್ಟಿಗೆ ಹೋಗುವುದಾಗಿ ಭರವಸೆ ನೀಡುವ ಮೂಲಕ ಅವಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಆದ್ರೆ ಅವರಿಗೂ ಬಸ್ ಟಿಕೆಟ್ ಸಿಗದ ಕಾರಣ ಇಬ್ಬರು ಉತ್ತರ ದೆಹಲಿಯ ಕಾಶ್ಮೇರೆ ಗೇಟ್‌ನಲ್ಲಿ ಕಾರನ್ನು ನಿಲ್ಲಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ವಾಗ್ವಾದ ನಡೆಸಿದ್ದಾರೆ. ಸಾಹಿಲ್ ಅವರು ಎರಡು ಮನಸ್ಸಿನಲ್ಲಿದ್ದರು. ಅದು ಸಾಹಿಲ್‌ನ ಮದುವೆಯ ದಿನ ಮತ್ತು ಅವನ ಕುಟುಂಬ ಕರೆ ಮಾಡುತ್ತಲೇ ಇತ್ತು. ಫೆಬ್ರವರಿ 10 ರಂದು ಬೆಳಿಗ್ಗೆ 9 ಗಂಟೆಗೆ ಕಿರುಚಾಟದ ನಡುವೆ, ಸಾಹಿಲ್ ತನ್ನ ಚಾರ್ಜಿಂಗ್ ಕೇಬಲ್ ಬಳಸಿ ತನ್ನ ಗೆಳತಿ ನಿಕ್ಕಿಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!