October 9, 2026
Friday, October 9, 2026
spot_img

ಪೂಜೆ ನೆಪದಲ್ಲಿ ಕರೆದೊಯ್ದು ಅರ್ಚಕನ ಕೊ*ಲೆ: ಆರು ವರ್ಷಗಳ ಬಳಿಕ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಹೊಸದಿಗಂತ ವರದಿ ಕಾರವಾರ:

ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಆರು ವರ್ಷಗಳ ಹಿಂದೆ 2018ರ ಅಕ್ಟೋಬರ್ 16ರಂದು ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ರನ್ನು ಪೂಜೆಯ ಕಾರಣ ಹೇಳಿ ಕರೆದೊಯ್ದು ಆರೋಪಿಗಳು, ಕೂಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲೇ ಮಾರಕಾಸ್ತ್ರಗಳಿಂದ ಹೊಡೆದು, ಕೊಲೆ ಮಾಡಿ ಶವವನ್ನು ತೋಟದಲ್ಲೇ ಹೂತುಹಾಕಲಾಗಿತ್ತು.

ಇದನ್ನೂ ಓದಿ:

ಈ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು, ಕೃತ್ಯವೆಸಗಿದ ಮೂವರು ಅಪರಾಧಿಗಳಾದ ಕುಮಟಾದ ಕೂಜಳ್ಳಿ ಗ್ರಾಮದ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಮತ್ತು ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಕುಮಟಾ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ಅವರ ತಂಡ ಶವವನ್ನು ಹೊರತೆಗೆದು ಶವಪರೀಕ್ಷೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು.

Must Read