ಹೊಸದಿಗಂತ ವರದಿ ಹಾವೇರಿ:
ಚಿತ್ರದುರ್ಗದ ಶಿವಮೂರ್ತಿ ಮುರಘಾ ಶರಣರು ಹಾವೇರಿಯ ಶಾಖಾಮಠವಾದ ಹೊಸಮಠಕ್ಕೆ ಶುಕ್ರವಾರ ಆಗಮಿಸಿದ್ದಾರೆ. ಅಲ್ಲಿ ಶರಣರು ವಿಶ್ರಾಂತಿ ಪಡೆಯುತ್ತಿದ್ದಾರೆ.
ಶನಿವಾರ ಭಕ್ತರನ್ನ ಭೇಟಿಯಾಗಲಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮಿಜಿ ತಿಳಿಸಿದ್ದಾರೆ.
ಇಲ್ಲಿನ ಭಕ್ತರ ಕೋರಿಕೆ ಮೇರೆಗೆ ತವರು ಮನೆಗೆ ಬಂದಿದ್ದಾರೆ. ಮುರುಘಾ ಶರಣರ ಮೂಲ ಮಠವಿದು, ಮುರುಘಾ ಶರಣರು ಮೌನ ವೃತದಲ್ಲಿದ್ದಾರೆ.
ಈ ಮಠ ಮುರುಘಾ ಶರಣರಿಗೆ ತವರ ಮನೆ ಇದ್ದಂತೆ. ಬೇಜಾರು ಆದಾಗ, ಹೊಸ ವಾತಾವರಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.