ಪಂಚಮಸಾಲಿ ಪೀಠಕ್ಕೆ ಮಾತ್ರವಲ್ಲ, ಎಲ್ಲ ಪೀಠಕ್ಕೂ ನನ್ನ ಬೆಂಬಲ: ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ವರದಿ, ಕಲಬುರಗಿ:

ಪಂಚಮಸಾಲಿ ಪೀಠಕ್ಕೆ ಮಾತ್ರವಲ್ಲ, ಎಲ್ಲಾ ಪೀಠಗಳಿಗೆ ನನ್ನ ಗೌರವವಿದ್ದು, ಎಲ್ಲ ಪೀಠಗಳಿಗೆ ನನ್ನ ಬೆಂಬಲವಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಎಲ್ಲಾ ಪಂಗಡಗಳು,ಉಪ ಪಂಗಡಗಳು ಆಥಿ೯ಕವಾಗಿ,ಸಾಮಾಜಿಕವಾಗಿ ಬಲಿಷ್ಠವಾಗುವ ನಿಟ್ಟಿನಲ್ಲಿ ಎಲ್ಲ ಪೀಠಗಳಿಗೆ ನನ್ನ ಸಹಕಾರ ಇರಲಿದೆ ಎಂದರು.

ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಡೀ ವಿಶ್ವದಲ್ಲೆ ಅತ್ಯಂತ ಹೆಚ್ಚು ಕಾಯ೯ಕತ೯ರನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಪಕ್ಷ ಇದೀಗ ಮುಳುಗುವ ಹಡುಗಾಗಿ ಹೋಗಿದ್ದು, ಇದನ್ನು ಕಾಂಗ್ರೆಸ್ ನವರು ಅಥ೯ ಮಾಡಿಕೊಳ್ಳಬೇಕೆಂದರು. ಕಾಂಗ್ರೆಸ್ ಪಕ್ಷದಿಂದ ನಮಗೆ ಕಲಿಯಬೇಕಾದ ಅನಿವಾರ್ಯ ಇಲ್ಲ. ನಮಗೆ ಮಾಗ೯ದಶ೯ನ ಮಾಡಲು ಸಂಘ ಪರಿವಾರ ಇದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವು ಸಹ ದೊರೆತಿಲ್ಲ. ಈ ಸ್ಥಿತಿಯಿರುವಾಗ, ಬಿಜೆಪಿ ಶಾಸಕರು ಯಾಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಗೆ ವಲಸೆ ಬಂದವರು ಜಾತ್ರೆ ಮಾಡಿ ಹೋಗುತ್ತಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಕೆಗೆ ಪ್ರತಿಕ್ರಿಯೆ ನೀಡಿ, ಎರಡುವರೇ ಲಕ್ಷ ಮತಗಳನ್ನು ಪಡೆದು ಆಯ್ಕೆಯಾದವರು ಈ ರೀತಿ ಹೇಳಿಕೆ ನೀಡಬಾರದು. ವಲಸೆ ಬಂದವರು ಸಹ ನಮ್ಮ ಅಣ್ಣ-ತಮ್ಮಂದಿರಾಗಿದ್ದಾರೆ ಎಂಬ ಅಂಶ ಗಮನವಿರಬೇಕೆಂದರು. ಅವರು ಸಹ ಪಕ್ಷ ಬಿಡುವ ಮಾತನ್ನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದರು.

ವಲಸೆ ಬಂದವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಬಾರದೆಂದು ಟಾಂಗ್ ನೀಡಿದರು. ನಮಗೆ ಬಹಿರಂಗವಾಗಿ ಈ ತರಹದ ಹೇಳಿಕೆ ನೀಡಬಾರದೆಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟಿಲ ಅವರು ಸೂಚಿಸಿದ್ದು, ಒಂದು ವೇಳೆ ಹೀಗೆ ಮಾತುಗಳು ಮುಂದುವರೆದರೇ, ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!