ಸಾಮಾಗ್ರಿಗಳು
ಮಶ್ರೂಮ್
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಸಾಂಬಾರ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಜೀರಿಗೆ
ತುಪ್ಪ
ಕೊತ್ತಂಬರಿ
ಅಕ್ಕಿ
ಹೆಸರುಬೇಳೆ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ತುಪ್ಪ, ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಉಪ್ಪು,ಅರಿಶಿಣ ಹಾಕಿ
ನಂತರ ಮಶ್ರೂಮ್ ಹಾಕಿ ಬಾಡಿಸಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಇದಕ್ಕೆ ಅಕ್ಕಿ ಹಾಗೂ ಹೆಸರುಬೇಳೆ ಹಾಕಿ ಬಾಡಿಸಿ ನೀರು ಹಾಕಿ
ರುಚಿ ನೋಡಿ ಕುಕ್ಕರ್ನಲ್ಲಿ ಮೂರು ವಿಶಲ್ ಸಣ್ಣ ಉರಿಯಲ್ಲಿ ಕೂಗಿಸಿದರೆ ಕಿಚಡಿ ರೆಡಿ