ಹಿಂದಿ-ಪಂಜಾಬಿ ಭಾಷಾಶಾಸ್ತ್ರಜ್ಞ, ಪದ್ಮಶ್ರೀ ಡಾ. ಟೊಮಿಯೊ ಭೇಟಿಯಾದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ-7ಶೃಂಗಸಭೆಯ ಭಾಗವಾಗಿ ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಜಪಾನಿನ ಖ್ಯಾತ ಲೇಖಕ, ಹಿಂದಿ ಮತ್ತು ಪಂಜಾಬಿ ಭಾಷಾಶಾಸ್ತ್ರಜ್ಞ, ಪದ್ಮಶ್ರೀ ಡಾ. ಟೊಮಿಯೊ ಮಿಜೋಕಾಮಿ ಅವರನ್ನು ಜಪಾನ್‌ನ ಹಿರೋಷಿಮಾದಲ್ಲಿ ಭೇಟಿಯಾಗಿ ಅವರೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಜಪಾನ್‌ನಲ್ಲಿ ಭಾರತೀಯ ಸಾಹಿತ್ಯವನ್ನು ಉತ್ತೇಜಿಸಲು ಮತ್ತು ಉಭಯ ದೇಶಗಳನ್ನು ಹತ್ತಿರ ತರುವಲ್ಲಿ ಡಾ. ಮಿಜೋಕಾಮಿ ಅವರ ಕೊಡುಗೆಗಾಗಿ ಪ್ರಧಾನಿ ಶ್ಲಾಘಿಸಿದರು ಎಂದು ಅರಿಂದಮ್ ಬಾಗ್ಚಿ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಜಪಾನಿನ ಪ್ರಮುಖ ವರ್ಣಚಿತ್ರಕಾರ್ತಿ ಹಿರೋಕೊ ಟಕಯಾಮಾ ಅವರೊಂದಿಗೂ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಒಂದು ಉತ್ತಮ ಪೈಂಟಿಂಗ್‌ನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!