ಟ್ವೀಟರ್‌ ಖರೀದಿಯಿಂದ ಮಸ್ಕ್‌ ಹಿಂದಕ್ಕೆ: ಮುಂದೇನಾಗಬಹುದು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಹಾಗೂ ಟೆಸ್ಲಾದ ಮಾಲೀಕರಾದ ಎಲಾನ್‌ ಮಸ್ಕ್‌ 44 ಬಿಲಿಯನ್‌ ಡಾಲರ್‌ ಗೆ ಪ್ರಸಿದ್ಧ ಸೊಷಿಯಲ್‌ ಮೀಡಿಯಾ ಟ್ವೀಟರ್‌ ಅನ್ನು ಖರೀದಿಸಲು ಮುಂದಾಗಿದ್ದರು. ಕೆಲ ತೊಡಕುಗಳನ್ನು ನಿವಾರಿಸಿಕೊಂಡು ಖರೀದಿ ಪ್ರಕ್ರಿಯೊಂದು ಬಾಕಿಯಿತ್ತು. ಆದರೀಗ ಮಸ್ಕ್‌ ಟ್ವೀಟರ್‌ ಖರೀದಿಯಿಂದ ಹಿಂದೆ ಸರಿದಿದ್ದಾರೆ.

ಸ್ಪಾಮ್‌( spam) ಹಾಗೂ ನಕಲಿ ಖಾತೆಗಳ ವಿವರವನ್ನು ನೀಡುವಲ್ಲಿ ಟ್ವೀಟರ್‌ ವಿಫಲವಾಗಿದೆ ಎಂದು ಆರೋಪಿಸಿ ಹಿಂದೆ ಸರಿದಿದ್ದು ಇದು ಎರಡು ಶಕ್ತಿಶಾಲಿಗಳ ನಡುವಿನ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಒಂದು ಕಡೆ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳಲ್ಲೊಂದಾದ ಟ್ವೀಟರ್‌ ಇದ್ದರೆ ಎದುರಾಳಿಯಾಗಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಮಸ್ಕ್‌ ನಿಂತಿದ್ದಾರೆ.

ಟೆಸ್ಲಾ ಮಾಲೀಕ ಮಸ್ಕ್‌ ಎದುರಲ್ಲಿ ಹಣಗಳಿಸಲು ಹಾಗೂ ಬೆಳೆಯಲು ಹೆಣಗಾಡುತ್ತಿರುವ ಟ್ವೀಟರ್‌ ಗೆ ಈ ಸನ್ನಿವೇಶವು ಉತ್ತಮವಾಗಿಲ್ಲ. ಮುಂದೇನಾಗಬಹದು ಎಂದು ಪರಾಮರ್ಶಿಸುವುದಾದರೆ ಈ ಕೆಳಗಿನ ಸಂಭವನೀಯತೆಗಳಲ್ಲಿ ಯಾವುದಾದರೂ ಒಂದು ನಡೆಯಬಹುದು.

  • ನ್ಯಾಯಾಧೀಶರು ಟ್ವಿಟ್ಟರ್ ಪರವಾಗಿ 44 ಬಿಲಿಯನ್ ಡಾಲರ್‌ ಒಪ್ಪಂದವನ್ನು ಪೂರ್ಣಗೊಳಿಸಲು ಮಸ್ಕ್ ಅನ್ನು ಒತ್ತಾಯಿಸಬಹುದು.
  • ಮಸ್ಕ್‌ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು 1 ಬಿಲಿಯನ್‌ ಡಾಲರ್‌ ಮುಕ್ತಾಯ ಶುಲ್ಕ ಪಾವತಿಸಲು ಒತ್ತಾಯಿಸಬಹುದು
  • ಈ ಕೇಸಿನಲ್ಲಿ ಎಲಾನ್‌ ಮಸ್ಕ್‌ ಗೆಲುವು ಸಾಧಿಸಿ ಏನನ್ನೂ ಪಾವತಿಸದೇ ಹೊರನಡೆಯಬಹುದು
  • ಪ್ರಕರಣವು 1 ಬಿಲಯನ್‌ ಡಾಲರ್‌ ಗಿಂತ ಹೆಚ್ಚಿನ ಮತ್ತು 44 ಬಿಲಿಯನ್‌ ಡಾಲರ್‌ ಗಿಂತ ಕಡಿಮೆ ಮೊತ್ತದ ಪಾವತಿಯೊಂದಿಗೆ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬಹುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!