ಟ್ವೀಟರ್‌ ಖರೀದಿಸಿದ ಮಸ್ಕ್‌: ಏನೆಲ್ಲಾ ಬದಲಾಗಬಹುದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊನೆಗೂ ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ 44 ಬಿಲಿಯನ್‌ ಮೊತ್ತಕ್ಕೆ 100% ಪಾಲುದಾರಿಕೆಯನ್ನು ಖರೀದಿಸುವ ಮೂಲಕ ಟ್ವೀಟರ್ ನ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ. ಪ್ರತಿ ಶೇರಿಗೆ 54.2 ಡಾಲರ್‌ ನಂತೆ ಎಲ್ಲಾ ಮೊತ್ತವನ್ನೂ ನಗದು ರೂಪದಲ್ಲೇ ಪಾವತಿಸಿರುವ ಮಸ್ಕ್‌ ಪ್ರಸಿದ್ಧ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಟ್ವೀಟರ್‌ ಖರೀದಿಸುವುದಾಗಿ ಘೋಷಿಸಿದ್ದ ಮಸ್ಕ್‌ “ಟ್ವೀಟರ್‌ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಅದನ್ನು ಅನಾವರಣ ಗೊಳಿಸುತ್ತೇನೆ” ಎಂದಿದ್ದರು. ಈಗ ಮಸ್ಕ್‌ಮಾಲೀಕತ್ವದ ಅಡಿಯಲ್ಲಿ ಟ್ವೀಟರ್‌ ನಲ್ಲಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ.

ಕಳೆದ ತಿಂಗಳು ಪ್ರಾರಂಭವಾದ ʼಟ್ವೀಟರ್‌ ವಾರ್‌ʼನಲ್ಲಿ ಮಸ್ಕ್‌ “ಟ್ವೀಟರ್‌ ವಾಕ್‌ ಸ್ವಾತಂತ್ರ್ಯಕ್ಕೆ ಮುಕ್ತವಾಗಿಲ್ಲ” ಎಂದು ದೂರಿದ್ದರು. ಈ ಕುರಿತು ಹೊಸ ಪ್ಲಾಟ್‌ ಫಾರ್ಮ್‌ ಅನ್ನು ಪ್ರಾಋಂಭಿಸಬೇಕೇ ಎಂಬ ಅವರ ಪ್ರಶ್ನೆಗೆ ಹೆಚ್ಚಿನ ಟ್ವೀಟರ್‌ ಬಳಕೆದಾರರು ಟ್ವೀಟರನ್ನು ಖರೀದಿಸುವಂತೆ ಒತ್ತಾಯಿಸಿದ್ದರು. ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಕೆಲವು ಧ್ವನಿಗಳನ್ನು ಸೆನ್ಸಾರ್ ಮಾಡಿದ್ದಕ್ಕಾಗಿ ಮಸ್ಕ್‌ ಆಗಾಗ ಟ್ವಿಟರ್ ಅನ್ನು ಪ್ರಶ್ನಿಸುತ್ತಿದ್ದರ. ಹಾಗಾಗಿ ಮಸ್ಕ್‌ ಮೊದಲು ವಿಷಯ ಮಿತಿಗೊಳಿಸುವುದನ್ನು(ಕಂಟೆಂಟ್‌ ಮಾಡರೇಷನ್) ತೆಗೆದು ಹಾಕಬಹುದು ಎಂದು ನಿರೀಕ್ಷಿಸಬಹುದಾಗಿದೆ. ‌

ಎರಡನೇಯದಾಗಿ ಮಸ್ಕ್‌ ಮಾಲೀಕರಾದ ನಂತರ ಟ್ವೀಟರ್‌ ನಲ್ಲಿ ಎಡಿಟ್‌ ಬಟನ್‌ ಅನ್ನು ಬಹಳ ಬೇಗವಾಗಿ ಪಡೆಯುವ ನಿರೀಕ್ಷೆಯಿದೆ. ಕಳೆದ ತಿಂಗಳಿನಲ್ಲಿ ಕಂಪೆನಿಯು ಎಡಿಟ್‌ ಬಟನ್‌ ಅನ್ನು ಮೊದಲು ಬ್ಲೂಟಿಕ್‌ ಬಳಕೆದಾರರೊಂದಿಗೆ ಪರೀಕ್ಷಿಸಿಸುವುದಾಗಿ ಹೇಳಿತ್ತು. ಮಸ್ಕ್‌ ಬಂದನಂತರ ಈ ಬದಲಾಔಣೆಯು ವೇಗ ಪಡೆದುಕೊಳ್ಳುತ್ತದೆ ಎನ್ನಲಾಗಿದೆ.

ಇನ್ನು ಮಸ್ಕ್‌ ಟ್ವೀಟರ್‌ ನಲ್ಲಿರುವ ಸ್ಪಾಮ್‌ ಅಕೌಂಟ್‌ ಅಥವಾ ಸ್ಪಾಮ್‌ ಬೋಟ್‌ (ವಂಚಕರ ಖಾತೆ) ಗಳ ನ್ನುತಗೆದು ಹಾಕುವ ನಿರೀಕ್ಷೆಯಿದೆ. ಏಕೆಂದರೆ ಮಸ್ಕ್‌ ಇದನ್ನು “ಅತ್ಯಂತ ಕಿರಿಕಿರಿ ವಿಷಯ” ಎಂದು ದೂರಿದ್ದರು. 2020 ರಲ್ಲಿ, ಬಿಟ್‌ಕಾಯಿನ್ ಹಗರಣದಲ್ಲಿ ಹ್ಯಾಕ್ ಮಾಡಲಾದ ಹೈ-ಪ್ರೊಫೈಲ್ ಟ್ವಿಟರ್ ಖಾತೆಗಳಲ್ಲಿ ಮಸ್ಕ್ ಅವರ ಖಾತೆಯೂ ಸೇರಿತ್ತು. ಕೊನೆಯದಾಗಿ, ಮಸ್ಕ್ ಈಗ ಮಾಲೀಕರಾಗಿರುವುದರಿಂದ ಟ್ವೀಟರ್ ಹೆಚ್ಚು ತೆರೆದ ಮೂಲದ (ಓಪನ್‌ ಸೊರ್ಸ್‌) ವೇದಿಕೆಯಾಗಿ ಮಾರ್ಪಾಡಾಗಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!