ಸಂಕಷ್ಟದಲ್ಲಿರುವ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಖರೀದಿಗೆ ಮುಕ್ತವಾಗಿದ್ದೇನೆ ಎಂದ ಮಸ್ಕ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದಲ್ಲಿ ಕೋಲಾಹಲವನ್ನೇ ಸೃಷ್ಟಿಸಿರುವ ಸಿಲಿಕಾನ್‌ ವ್ಯಾಲೀ ಬ್ಯಾಂಕ್ ಅನ್ನು ಖರೀದಿಸಲು ಮುಕ್ತವಾಗಿರುವುದಾಗಿ ಬಿಲಿಯನೇರ್‌ ಎಲಾನ್‌ ಮಸ್ಕ್‌ ಹೇಳಿದ್ದಾರೆ. ನಷ್ಟವನ್ನು ಬಹಿರಂಗ ಪಡಿಸಿದ ಪರಿಣಾಮ ಸಿಲಿಕನ್‌ ವ್ಯಾಲೀ ಬ್ಯಾಂಕಿನ ಷೇರುಗಳು ಮಾರುಕಟ್ಟೆಯಲ್ಲಿ 60 ಶೇಕಡಾಗಿಂತ ಕುಸಿತ ಕಂಡಿದ್ದು ಅಲ್ಲಿನ ಆರ್ಥಿಕ ನಿಯಂತ್ರಕರು ತಾತ್ಕಾಲಿಕವಾಗಿ ಬ್ಯಾಂಕನ್ನು ಸ್ಥಗಿತಗೊಳಿಸಿದ್ದಾರೆ. ಬ್ಯಾಂಕಿನ ಠೇವಣಿ ದಾರರು ತಮ್ಮ ಠೇವಣಿ ಇಟ್ಟಿರುವ ಹಣದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟು ಎದುರಿಸುತ್ತಿರುವ ಈ ಬ್ಯಾಂಕನ್ನು ಖರೀದಿಸಲು ಟೆಸ್ಲಾ ಮತ್ತು ಟ್ವಿಟರ್‌ ಸಿಇಒ ಬಿಲಿಯನೇರ್‌ ಎಲಾನ್‌ ಮಸ್ಕ್‌ ಮುಕ್ತವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ರೇಜರ್ ಸಹ-ಸಂಸ್ಥಾಪಕ ಮತ್ತು ಸಿಇಒ ಮಿನ್-ಲಿಯಾಂಗ್ ಟಾನ್ ಅವರು ಟ್ವೀಟ್‌ ನಲ್ಲಿ “SVB ಬ್ಯಾಂಕನ್ನು ಮಸ್ಕ್ ಖರೀದಿಸಬೇಕು ಮತ್ತು ಡಿಜಿಟಲ್ ಬ್ಯಾಂಕ್ ಆಗಬೇಕು” ಎಂದಿದ್ದರು. ಈ ಟ್ವೀಟ್‌ ಗೆ ಪ್ರತಿಕ್ರಿಯೆಯಾಗಿ ಟ್ವೀಟ್‌ ಮಾಡಿರುವ ಮಸ್ಕ್‌ “ನಾನು ಖರೀದಿಗೆ ಮುಕ್ತವಾಗಿದ್ದೇನೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!