4 ಬಿಲಿಯನ್ ಡಾಲರ್ ಮೌಲ್ಯದ 19.5 ಮಿಲಿಯನ್ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ ಮಸ್ಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಟ್ವಿಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಸುಮಾರು 4 ಬಿಲಿಯನ್ ಡಾಲರ್ ಮೌಲ್ಯದ 19.5 ಮಿಲಿಯನ್ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಯುಎಸ್ ಸೆಕ್ಯುರಿಟೀಸ್ ಫೈಲಿಂಗ್ಸ್ ಮಂಗಳವಾರ ತೋರಿಸಿದೆ. ಷೇರುಗಳ ನಿಖರವಾದ ಮೌಲ್ಯವು 3.95 ಬಿಲಿಯನ್ ಡಾಲರ್ ಆಗಿದೆ ಎನ್ನಲಾಗಿದೆ.

ಈ ಇತ್ತೀಚಿನ ಮಾರಾಟದೊಂದಿಗೆ, ಮಸ್ಕ್ ಇಲ್ಲಿಯವರೆಗೆ ಸುಮಾರು 20 ಬಿಲಿಯನ್ ಡಾಲರ್‌ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಹಿಂದೆ, ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ಒಟ್ಟು 15.4 ಶತಕೋಟಿ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದರು. ಮತ್ತು ಮುಂದೆ ಯಾವುದೇ ರೀತಿಯಲ್ಲಿ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡುವ ಯೋಜನೆ ಇಲ್ಲ ಎಂದಿದ್ದರು.

ಮಸ್ಕ್ ಕಳೆದ ತಿಂಗಳು ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡರು ಮತ್ತು ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದು ಮತ್ತು ಬ್ಲೂ ಟಿಕ್ ಪರಿಶೀಲನೆ ಗುರುತುಗಳಿಗೆ ಶುಲ್ಕ ವಿಧಿಸುವ ಯೋಜನೆ ಸೇರಿದಂತೆ ಹಲವು ಕಠಿಣ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!