ರಾತ್ರಿ ಮನೆಗೂ ಹೋಗದೇ ಕಷ್ಟಪಟ್ಟು ದುಡಿದ ಮಹಿಳೆಯನ್ನು ಕ್ಷಣಮಾತ್ರದಲ್ಲಿ ಕೆಲಸದಿಂದ ತೆಗೆದ ಮಸ್ಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಂಪನಿಯಲ್ಲಿ ಬರೀ ಉದ್ಯೋಗಿಯಾಗಿರದೇ ಕಂಪನಿಯ ಏಳಿಗೆಗೆ ದುಡಿದ ಮಹಿಳೆಯನ್ನು ಎಲಾನ್ ಮಸ್ಕ್ ಕೆಲಸದಿಂದ ತೆಗೆದು ಹಾಕಿದ್ದಾರೆ. ಎಲಾನ್ ಮಸ್ಕ್ ಟ್ವಿಟರ್‌ನಿಂದ ಮತ್ತೊಂದು ರೌಡ್ ಕೆಲಸದ ಕಡಿತ ಮಾಡಿದ್ದಾರೆ. ಕಳೆದ ವೀಕೆಂಡ್‌ನಲ್ಲಿ ಇಡೀ ಪ್ರಾಜಕ್ಟ್ ಟೀಂ ಒಂದನ್ನು ಕೆಲಸದಿಂದ ತೆಗೆದಿದ್ದಾರೆ.

ಇದರಲ್ಲಿ ಎಸ್ತರ್ ಕ್ರಾಫೋರ್ಡ್ ಎಂಬ ಮಹಿಳೆಯೂ ಇದ್ದು, ಈಕೆ ಮನೆಗೂ ಹೋಗದೆ ಆಫೀಸ್‌ನಲ್ಲಿ ಮಲಗಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಟ್ವಿಟರ್‌ಗೆ ಹೊಸ ಆದಾಯ ಮೂಲವಾಗಿರುವ ಟ್ವಿಟರ್ ಪೇಮೆಂಟ್ಸ್ ಫೀಚರ್‌ನ ಅಭಿವೃದ್ಧಿಯಲ್ಲಿ ಈಕೆಯ ಪಾತ್ರ ಇತ್ತು. ಆದ್ರೂ ಮಸ್ಕ್ ಇವರನ್ನು ಕೆಲಸದಿಂದ ತೆಗೆದಿದ್ಯಾಕೆ?

ಕಳೆದ ವರ್ಷ ಎಲಾನ್ ಟ್ವಿಟರ್ ಮಾಲೀಕತ್ವ ಪಡೆದಾಗ ಸಾಕಷ್ಟು ಉದ್ಯೋಗಿಗಳನ್ನು ಹೊರಹಾಕಿದರೆ, ಮಸ್ಕ್‌ಗೆ ಬೇಕಾದಂತೆ ಟ್ವಿಟರ್‌ನ ರೂಪುರೇಷೆಗಳನ್ನು ಬದಲಾಯಿಸಲು ಎಸ್ತರ್ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದರು. ಆದರೂ ಇವರು ಹಾಗೂ ಇಡೀ ಟೀಂನನ್ನೇ ಮಸ್ಕ್ ವಜಾಗೊಳಿಸಿದ್ದಾರೆ, ಕಾರಣ ಮಸ್ಕ್ ಅವರೇ ತಿಳಿಸಬೇಕಿದೆ!

ಕಷ್ಟಪಟ್ಟು ಕೆಲಸ ಮಾಡಿದ್ದು, ಹಾರ್ಡ್ ವರ್ಕ್ ಮಾಡಿದ್ದೇ ತಪ್ಪಾಯಿತು. ಆಡಿಕೊಳ್ಳುವವರು ಒಂದು ಬಲಿಯಲ್ಲಿರ‍್ತಾರೆ ಅಷ್ಟೆ, ಮೇನ್ ರೋಡ್‌ಗೆ ಬರೋದಿಲ್ಲ ಎಂದು ಎಸ್ತರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!