Wednesday, October 5, 2022

Latest Posts

ಮ್ಯಾಂಚೆಸ್ಟರ್‌ ಯುನೈಟೆಡ್‌ ಖರೀದಿಸ್ತಾರಂತೆ ಮಸ್ಕ್‌!

 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವೀಟರ್ರ್‌ ಖರೀದಿಸುವುದಾಗಿ ಹೇಳಿ ಕೊನೆಗೆ ಸರಿಹೊಂದದೇ ಡೀಲ್‌ ಬಿಟ್ಟು ಹೊರಬಂದ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾದ ಮಾಲೀಕ ಎಲಾನ್‌ ಮಸ್ಕ್‌ ಇದೀಗ ಮತ್ತೊಂದು ಖರೀದಿಗೆ ಮುಂದಾಗಿದ್ದಾರೆ. ಪ್ರಸಿದ್ಧ ಫುಟ್ಬಾಲ್‌ ತಂಡ ಮ್ಯಾಂಚೆಸ್ಟರ್‌ ಯುನೈಟೆಡ್‌ ಅನ್ನು ಖರೀದಿಸುವುದಾಗಿ ಮಸ್ಕ್‌ ಹೇಳಿದ್ದಾರೆ.

” ನಾನು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ” ಎಂದು ಮಸ್ಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ, ಅವರು ನಿಜವಾಗಿಯೂ ಡೀಲ್‌ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಮಸ್ಕ್‌ ಕೆಲವೊಮ್ಮೆ ದಾರಿತಪ್ಪಿಸುವ ಟ್ವೀಟ್‌ಗಳನ್ನು ಮಾಡುವ ಇತಿಹಾಸ ಹೊಂದಿದ್ದಾರೆ.

ಇನ್ನು ಮ್ಯಾಂಚೆಸ್ಟರ್ ಯುನೈಟೆಡ್ ಪಿಎಲ್‌ಸಿ ಬಗ್ಗೆ ನೋಡುವುದಾದರೆ, ಅಮೇರಿಕನ್ ಗ್ಲೇಜರ್ ಕುಟುಂಬದಿಂದ ನಿಯಂತ್ರಿಸಲ್ಪಡುವ ಮ್ಯಾಂಚೆಸ್ಟರ್ ಯುನೈಟೆಡ್, ಮಂಗಳವಾರದ ಮುಕ್ತಾಯದ ಪ್ರಕಾರ ಫುಟ್‌ಬಾಲ್ ಕ್ಲಬ್ $2.08 ಶತಕೋಟಿಯ ಮಾರುಕಟ್ಟೆ ಬಂಡವಾಳವನ್ನು ಹೊಂದಿತ್ತು. 2005 ರಲ್ಲಿ 790 ಮಿಲಿಯನ್ ಪೌಂಡ್‌ಗಳಿಗೆ (955.51 ಮಿಲಿಯನ್ ಡಾಲರ್‌) ಕ್ಲಬ್ ಅನ್ನು ಗ್ಲೇಜರ್‌ ಖರಿದಿಸಿತ್ತು. ಇದರ ವಿರುದ್ಧ ಹಲವು ಅಭಿಮಾನಿಗಳು ಪ್ರತಿಭಟಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!