ಬರೋಬ್ಬರಿ 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ಪ್ರಾಯೋಗಿಕ ಸಂಚಾರ ಸೂಪರ್ ಸಕ್ಸಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅತಿ ಉದ್ದದ 3.5 ಕಿ.ಮೀ ಸರಕು ಸಾಗಣೆ ರೈಲು ಸೂಪರ್ ವಾಸುಕಿ ಪ್ರಾಯೋಗಿಕ ಸಂಚಾರವನ್ನು ಕೇಂದ್ರ ರೈಲ್ವೆ ಇಲಾಖೆ ಯಶಸ್ವಿಯಾಗಿ ನಡೆಸಿತು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ರೈಲ್ವೆ ಇಲಾಖೆಯು ಸೂಪರ್ ವಾಸುಕಿ ಪ್ರಾಯೋಗಿಕ ಸಂಚಾರವನ್ನು ನಡೆಸಿ ಯಶಸ್ವಿಯಾಗಿದೆ. ಈ ರೈಲಿನಲ್ಲಿ ಸರಕು ಭರ್ತಿಯಾದ 295 ವ್ಯಾಗನ್‌ಗಳು ಇದ್ದು, ಒಟ್ಟಾರೆ 27,000 ಟನ್ ಕಲ್ಲಿದ್ದಲು ಸಾಗಣೆ ಮಾಡಿತು. ಇದು ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ.

ರೈಲು ಛತ್ತೀಸಗಡದಲ್ಲಿ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿತು. ಆಗ್ನೇಯ ಕೇಂದ್ರ ರೈಲ್ವೆಯು ಬಿಲಾಸ್‌ಪುರದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇದರ ನಿರ್ವಹಣೆ ಮಾಡಲಿದೆ. ಹೀಗೆ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿ ರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!