ಟ್ವಿಟರ್‌ ಸ್ಥಿರಗೊಳಿಸುವವರೆಗೆ ಅಲ್ಲಿಯೇ ನಿದ್ರಿಸುತ್ತೇನೆಂದ ಮಸ್ಕ್: ಟೆಸ್ಲಾ ಹೂಡಿಕೆದಾರರಲ್ಲಿ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಹುಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ ಅನ್ನು 44 ಬಿಲಿಯನ್‌ ಡಾಲರುಗಳಿಗೆ ವಶಪಡಿಸಿಕೊಂಡಿರುವ ಎಲಾನ್‌ ಮಸ್ಕ್‌ ಟ್ವಿಟರ್‌ ಪ್ಲಾಟ್‌ ಫಾರ್ಮ್‌ ಅನ್ನು ಸ್ಥಿರಗೊಳಿಸಲು ಹಗಲು ರಾತ್ರಿಯೆನ್ನದೇ ಕೆಲಸ ಮಾಡುತ್ತಿದ್ದಾರೆ. ಸೋಮವಾರದಂದು ಟ್ವಿಟರ್‌ ನ ಕೇಂದ್ರ ಕಚೇರಿ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ದಿನಪೂರ್ತಿ ಕೆಲಸ ಮಾಡಿದ ಮಸ್ಕ್‌ ರಾತ್ರಿಯ ಸಮಯದಲ್ಲಿಯೂ ಕಚೇರಿಯಲ್ಲೇ ಇದ್ದು ಕೆಲಸ ನಿರ್ವಹಿಸಿದ್ದಾರೆ. “ಟ್ವಿಟರ್‌ ಅನ್ನು ಸ್ಥಿರಗೊಳಿಸುವವರೆಗೆ ಇಲ್ಲಿಯೇ ಮಲಗುವೆ” ಎಂದಿದ್ದಾರೆ ಮಸ್ಕ್.‌

ಇದು ಅವರ ಇನ್ನೊಂದು ಕಂಪನಿಯಾದ ಟೆಸ್ಲಾದ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಎಲ್ಲಾ ಸಮಯವನ್ನೂ ಟ್ವಿಟರ್‌ ಗೆ ಹಾಕಿದರೆ ಟೆಸ್ಲಾದ ಕತೆಯೇನು? ಎಂದು ಟೆಸ್ಲಾದ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಎಲೆಕ್ಟ್ರಿಕ್‌ ಕಾರು ಉತ್ಪಾದನಾ ಕಂಪನಿ ಟೆಸ್ಲಾ ಹೊರ ಬಂದಾಗಲೂ ಕೂಡ ಎಲಾನ್‌ ಮಸ್ಕ್‌ ಇದೇ ರೀತಿ ಕಾರ್ಯ ನಿರ್ವಹಿಸಿದ್ದರು. ಟೆಸ್ಲಾದ ಕೇಂದ್ರ ಕಚೇರಿಯಲ್ಲಿಯೂ ರಾತ್ರಿಪೂರ್ತಿ ಉಳಿದುಕೊಂಡು ಕಂಪನಿಯ ಕಾರ್ಯ ನಿರ್ವಹಣೆಯ ಬಗ್ಗೆ ಲಕ್ಷ್ಯವಹಿಸಿಸಿದ್ದರು. ಪ್ರಸ್ತುತ ಟ್ವಿಟರ್‌ ನಲ್ಲೇ ಅವರು ಬಹುಕಾಲ ಸಮಯ ಕಳೆದರೆ ವಿಶ್ವದ ಅತ್ಯಂತ ಪ್ರಸಿದ್ಧ ಕಾರು ತಯಾರಕ ಕಂಪನಿಯ ಕತೆಯೇನಾಗಬೇಕು ಎಂದು ಹೂಡಿಕೆದಾರರು ಪ್ರಶ್ನಿಸಿದ್ದಾರೆ.

“ಟೆಸ್ಲಾ ಹೂಡಿಕೆದಾರರು ನಿರಾಶೆಗೊಳ್ಳಲಿದ್ದಾರೆ” ಎಂದು ವೆಂಚರ್ ಕ್ಯಾಪಿಟಲ್ ಸಂಸ್ಥೆಯ ಲೌಪ್ ವೆಂಚರ್ಸ್‌ನ ವ್ಯವಸ್ಥಾಪಕ ಪಾಲುದಾರ ಜೀನ್ ಮನ್‌ಸ್ಟರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ಆದರೆ ಈ ಕುರಿತು ಮಸ್ಕ್‌ ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು “ನಾನು ಟೆಸ್ಲಾವನ್ನೂ ಕೂಡ ಗಮನಿಸುತ್ತಿದ್ದೇನೆ” ಎಂದಿದ್ದಾರೆ. ಈ ವಾರದ ಕೆಲಸದ ಭಾಗವಾಗಿ ಎಲೆಕ್ಟ್ರಿಕ್‌ ಕಾರು ತಯಾರಕ ಕಂಪನಿಯ ಕಚೇರಿಗೆ ತೆರಳುತ್ತಿರುವುದಾಗಿ ಅವರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!