Sunday, November 27, 2022

Latest Posts

ಶ್ರದ್ಧಾ ದೇಹದ ಭಾಗಗಳು ಸಿಕ್ಕಿದರೂ ತಲೆ ನಾಪತ್ತೆ, ಕೊಲೆಯಾದ ತಿಂಗಳಲ್ಲೇ ವೈದ್ಯರನ್ನು ಭೇಟಿ ಮಾಡಿದ್ದ ಅಫ್ತಾಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ತನ್ನ ಲಿವ್‌ಇನ್ ಪಾರ್ಟ್‌ನರ್ ಶ್ರದ್ಧಾಳ ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಪ್ರತಿದಿನ ಕೆಲವು ಭಾಗಗಳನ್ನು ಅರಣ್ಯ ಭಾಗದಲ್ಲಿ ಎಸೆದು ಬರುತ್ತಿದ್ದ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿ ಈಗಾಗಲೇ ಸ್ಥಳ ಮಹಜರು ಮಾಡಿದ್ದಾರೆ.

ಮಾನವ ದೇಹದ ಭಾಗಗಳನ್ನು ಒಳಗೊಂಡ 12 ಬ್ಯಾಗ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಮತ್ತೊಂದು ಸ್ಥಳದಲ್ಲಿ ದೇಹದ ಭಾಗಗಳಿದ್ದ 10 ಬ್ಯಾಗ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ತಲೆಯ ಭಾಗ ಇನ್ನೂ ಪತ್ತೆಯಾಗಿಲ್ಲ. ದೊರೆತ ಭಾಗಗಳು ತುಂಬಾ ಕೊಳೆತ ಸ್ಥಿತಿಯಲ್ಲಿ ಇದ್ದವು, ಎಷ್ಟರಮಟ್ಟಿಗೆ ಎಂದರೆ ಅದು ಮನುಷ್ಯರ ದೇಹದ ಭಾಗಗಳು ಎಂದು ತಿಳಿಯದಷ್ಟು ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಕೊಲೆ ಮಾಡಿದ ತಿಂಗಳಲ್ಲಿಯೇ ಅಫ್ತಾಬ್ ತೋಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿದ್ದ, ಮೃತದೇಹವನ್ನು ಕತ್ತರಿಸುವ ವೇಳೆ ಕೈಗೆ ಗಾಯವಾಗಿದ್ದು ಅದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!