ಎದೆಯ ಮೇಲೆ ಯೋಗಿ ಟ್ಯಾಟೂ: ಇದು ಮುಸ್ಲಿಂ ಯುವಕನ ಅಭಿಮಾನದ ಪರಾಕಾಷ್ಠೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದ ಹಲವು ಭಾಗಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕೋಮುವಾದ ಕಾವು ಕುದಿಯುತ್ತಿರುವ ಹೊತ್ತಿನಲ್ಲಿ ಈ ಸುದ್ದಿ ಸಂತಸ ಮೂಡಿಸುವಂತಹದ್ದು.
ಯಮೀನ್ ಸಿದ್ದಿಕಿ ಎಂಬ 23 ವರ್ಷದ ಮುಸ್ಲಿಂ ಯುವಕ ತನ್ನ ಎದೆಯ ಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.ಯೋಗಿ ತನ್ನ ರೋಲ್ ಮಾಡೆಲ್ ಎಂದು ಹೆಮ್ಮೆಯಿಂದ ಹೇಳುವ ಯುವಕ, ಈ ತಿಂಗಳ ಆರಂಭದಲ್ಲಿ ಯೋಗಿ ಆದಿತ್ಯಾನಾಥ್ ಅವರ ಹುಟ್ಟುಹಬ್ಬದಂದು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಉಡುಗೊರೆಯನ್ನು ನೀಡಿದ್ದಾನೆ.

ಸಿದ್ದಿಕಿ ಫರೂಕಾಬಾದ್ ಮತ್ತು ಮೈನ್‌ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯೊಂದರ ನಿವಾಸಿ. ಮತ್ತು ಇಲ್ಲಿ ಪಾದರಕ್ಷೆಗಳ ವ್ಯಾಪಾರವನ್ನು ನಿರ್ವಹಿಸುತ್ತಿದ್ದಾರೆ.
ಯೋಗಿ ಹಚ್ಚೆ ಹಾಕಿಸಿಕೊಂಡಾಗಿನಿಂದ ಅವರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಒಪ್ಪಿಕೊಳ್ಳುವ ಸಿದ್ಧೀಕಿ, ಅವುಗಳಿಂದ ನಾನೇನು ಬೇಸರಗೊಂಡಿಲ್ಲ ಎನ್ನುತ್ತಾರೆ.
“ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರಿಗೆ ನನ್ನ ಟ್ಯಾಟೂ ತೋರಿಸಬೇಕೆಂಬುದು ನನ್ನ ಆಸೆ. ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಅವರು ಯಾವುದೇ ಜನರಿಗೆ ತಾರತಮ್ಯ ಮಾಡುವುದಿಲ್ಲ ಮತ್ತು ಹಿಂದೂಗಳು ಮತ್ತು ಮುಸ್ಲಿಮರು ಸೇರಿದಂತೆ ಎಲ್ಲರೂ ಮಹಾನ್‌ ಜನ ನಾಯಕ ಯೋಗಿಜಿಯವರ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಿದ್ದಿಕಿ ಖುಷಿಯಿಂದ ಹೇಳುತ್ತಾರೆ.
ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾದಂತಹ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಲು ಸಿದ್ಧೀಕಿ ನಿರಾಕರಿಸಿದರು. “ಅವುಗಳನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಉತ್ತರಿಸಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!