ಹನುಮಂತನ ದೇವಾಲಯ ನಿರ್ಮಿಸಲು ತನ್ನ ಜಮೀನು ನೀಡಿದ ಮುಸ್ಲಿಂ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹನುಮಂತನ ದೇವಾಲಯವನ್ನು ನಿರ್ಮಿಸಲು ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಭೂಮಿಯನ್ನು ದಾನ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಾಪುರದಲ್ಲಿ ನಡೆದಿದೆ. ಬಾಬು ಅಲಿ ಭೂಮಿ ದಾನ ಕೊಟ್ಟ ಬಳಿಕ ರಸ್ತೆ ಕಾಮಗಾರಿಯೂ ಅಡೆತಡೆಯಿಲ್ಲದೆ ನಡೆಯುತ್ತಿದೆ. ಆ ಪ್ರದೇಶದಲ್ಲಿ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿ-24 ವಿಸ್ತರಣೆಯಾಗುತ್ತಿದೆ.

ಕಚಿಯಾನಿ ಕೇರಾ ಗ್ರಾಮದ ಮೂಲಕ ಆ ರಸ್ತೆಯ ಹಾದು ಹೋಗಲಿದೆ. ಈ ರಸ್ತೆ ಬರುವ ಜಾಗದಲ್ಲಿ ಹನುಂತನ ದೇವಾಲಯವಿದ್ದು ಅದನ್ನು ಕೆಡವಲು ಚರ್ಚೆ ನಡೆಯುತ್ತಿದೆ. ಇದನ್ನು ತಿಳಿದ ಬಾಬು ಅಲಿ ಅವರು ದೇವಸ್ಥಾನವನ್ನು ಬೇರೆಡೆಗೆ ಸ್ಥಳಾಂತರಿಸಲು ತಮ್ಮ 0.65 ಹೆಕ್ಟೇರ್ (6500 ಚದರ ಮೀಟರ್) ಜಮೀನನ್ನು ಬರೆದುಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮಸೇವಕ್ ದ್ವಿವೇದಿ ವಿವರಿಸಿದರು. ರಾಷ್ಟ್ರೀಯ ಹೆದ್ದಾರಿ-24ರ ಅಗಲೀಕರಣ ಯೋಜನೆಗೂ ಈ ಜಮೀನು ಸಮೀಪದಲ್ಲಿದೆ ಎಂದರು.

ಭೂ ವಿನಿಮಯಕ್ಕೆ ಸಂಬಂಧಿಸಿದಂತೆ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಅಪರ ಜಿಲ್ಲಾಧಿಕಾರಿ ರಾಶಿಕೃಷ್ಣ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!