Thursday, August 11, 2022

Latest Posts

ಮಹಾರಾಷ್ಟ್ರದಲ್ಲಿ ಧರ್ಮಪ್ರವಚನ ನಡೆಸುತ್ತಿದ್ದ ಅಫ್ಘಾನಿಸ್ತಾನದ ಧಾರ್ಮಿಕ ಮುಖಂಡನಿಗೆ ಗುಂಡಿಕ್ಕಿ ಹತ್ಯೆ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ  ಅಘಾನಿಸ್ತಾನ ಮೂಲಕ 35 ವರ್ಷದ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಬೈನಿಂದ 200 ಕಿಮೀ ದೂರದಲ್ಲಿರುವ ಯೆಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಮೂಲದ ಆಧ್ಯಾತ್ಮಿಕ ನಾಯಕನನ್ನು ನಾಲ್ವರು ಅಪರಿಚಿತ ವ್ಯಕ್ತಿಗಳ ಗುಂಪು ಗುಂಡಿಕ್ಕಿ ಕೊಂದಿದೆ. ಮೃತನನ್ನು ಖ್ವಾಜಾ ಸಯ್ಯದ್ ಚಿಶ್ತಿ ಎಂದು ಗುರುತಿಸಲಾಗಿದ್ದು, ಯೋಲಾದಲ್ಲಿ ‘ಸೂಫಿ ಬಾಬಾ’ ಎಂದು ಜನಪ್ರಿಯರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ.
ದಾಳಿಕೋರರು ಧಾರ್ಮಿಕ ಮುಖಂಡನ ಹಣೆಗೆ ಗುರಿಯಿಟ್ಟು ಬಂದೂಕಿನಿಂದ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಪ್ರಜೆ ಸೂಫಿ ಬಾಬಾನನ್ನು ಕೊಂದ ನಂತರ, ದುಷ್ಕರ್ಮಿಗಳು ಆತ ಬಳಸುತ್ತಿದ್ದ ಎಸ್‌ಯುವಿ ಕಾರನ್ನು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ಯೋಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss