ವಡೋದರಾದಲ್ಲಿ ಮುಸ್ಲಿಂ ಕಿಡಿಗೇಡಿಗಳಿಂದಕಲ್ಲು ತೂರಾಟ: ಸಾಯಿಬಾಬಾ ದೇವಾಲಯ ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕ್ಷುಲ್ಲಕ ಕಾರಣಕ್ಕೆ ಪ್ರಚೋದನೆಗೊಂಡ ಮುಸ್ಲಿಂ ಕಿಡಿಗೇಡಿಗಳ ಗುಂಪು ಕಲ್ಲು ತೂರಾಟ ನಡೆಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಗುಜರಾತ್‌ನ ವಡೊದರಾದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು ನಾಲ್ವರು ಗಾಯಗೊಂಡಿದ್ದು ಹತ್ತಕ್ಕೂ ಹೆಚ್ಚು ಅಂಗಡಿಗಳು ಜಖಂಗೊಂಡಿವೆ.

ವರದಿಗಳ ಪ್ರಕಾರ ಎರಡು ಬೈಕ್‌ ಗಳ ನಡುವೆ ಉಂಟಾದ ಅಪಘಾತವು ಘಟನೆಗೆ ಮೂಲ ಕಾರಣವಾಗಿದೆ. ಅಪಘಾತದ ನಂತರ ಎರಡೂ ಕಡೆಯವರ ನಡುವೆ ಮೊದಲು ವಾಗ್ವಾದ ಶುರುವಾಗಿ ಅದು ಎರಡು ಗುಂಪುಗಳ ಘರ್ಷಣೆಗೆ ಕಾರಣವಾಯಿತು. ಈ ವೇಳೆಯಲ್ಲಿ 300-400 ಜನ ಮುಸ್ಲಿಂ ಕಿಡಿಗೇಡಿಗಳ ಗುಂಪು ಏಕಾಏಕಿ ದಾಳಿ ಪ್ರಾರಂಭಿಸಿ ಎದುರಿನ ಬೈಕ್‌ ಸವಾರರಿಗೆ ಥಳಿಸಿದ್ದಲ್ಲದೇ ಕಲ್ಲು ತೂರಾಟನಡೆಸಿ ಹತ್ತಿರದಲ್ಲೇ ಇದ್ದ ಸಾಯಾಬಾಬಾ ಮಂದಿರವನ್ನು ನಾಶ ಮಾಡಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು ವಾತಾವರಣವನ್ನು ಶಾಂತಗೊಳಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಏಕಾಏಕಿ ಬಂದ ಕಿಡಿಗೇಡಿಗಳ ಗುಂಪಿನ ಮೇಲೆ ಸಂಶಯ ವ್ಯಕ್ತವಾಗಿದ್ದು ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಗೋಚರವಾಗುವಂತಿದೆ. ಸ್ಥಳೀಯರ ಪ್ರಕಾರ ಕಲ್ಲುತೂರಾಟ ನಡೆಸಿದ ಕಿಡಿಗೇಡಿಗಳು ಹೊರಗಡೆಯಿಂದ ಬಂದವರು ಎಂದು ಮಾಹಿತಿ ಲಭ್ಯವಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿದೆ.

ಇತ್ತೀಚೆಗೆ ಕಲ್ಲು ತೂರಾಟಗಳಂತಹ ಕೃತ್ಯಗಳು ಕಾಡ್ಗಿಚ್ಚಿನಂತೆ ದೇಶದಾದ್ಯಂತ ವ್ಯಾಪಿಸಿಕೊಳ್ಳುತ್ತಿದ್ದು ಇದು ಕಾಕತಾಳೀಯವೇ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡಿದ ಸಾಂಕ್ರಾಮಿಕವೇ ಅಥವಾ ಕಾಣದ ಕೈಗಳ ಪೂರ್ವಯೋಜಿತ ಕೃತ್ಯವೇ ಎಂಬುದು ತನಿಖೆಯ ನಂತರವೇ ತಿಳಿದು ಬರಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!