ಮುಸ್ಲಿಮರಿಂದ ಮೃತ ಹಿಂದೂ ಮಹಿಳೆಯ ಅಂತ್ಯಸಂಸ್ಕಾರ…

ಹೊಸದಿಗಂತ ವರದಿ ಮೈಸೂರು:

ಮೃತ ಹಿಂದೂ ಮಹಿಳೆಯೊಬ್ಬರ ಅಂತ್ಯಸಂಸ್ಕಾರವನ್ನ ಮುಸ್ಲಿಮರು ನೆರವೇರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗೌಸಿಯ ನಗರದ ನಿವಾಸಿ ಜಯಮ್ಮ (60) ಎಂಬುವರು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು.

ಸುಮಾರು 40 ವರ್ಷಗಳಿಂದ ಗೌಸಿಯನಗರದಲ್ಲಿ ವಾಸಿಸುತ್ತಿದ್ದ ಇವರಿಗೆ ಮಗ ಮತ್ತು ಸೊಸೆ ಇದ್ದು, ಬೇರೆ ಯಾರೂ ಸಂಬಂಧಿಕರಿರಲಿಲ್ಲ. ಹಾಗಾಗಿ, ಅಕ್ಕಪಕ್ಕದ ಮನೆಯ ಮುಸ್ಲಿಮರೇ ಜಯಮ್ಮ ಅವರ ಮಗ ಮತ್ತು ಸೊಸೆಯ ಸಹಾಯಕ್ಕೆ ಬಂದು ಜಯಮ್ಮನವರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಇಂದಿಗೂ ಜಾತ್ಯಾತೀತತೆ, ಸಹೋದರತಾ ಭಾವ ಇದೆ. ನಾವು ಕೋವಿಡ್ ಸಮಯದಲ್ಲಿಯೂ ಇಂತಹ ಸಾಮಾಜಿಕ ಕೆಲಸ ಮಾಡಿದ್ದೇವೆ ಎಂದು ಅಂತ್ಯ ಸಂಸ್ಕಾರ ನಡೆಸಿದ ತನ್ವೀರ್ ಪಾಷ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!