ಆ ಕಾಲೋನಿಯಲ್ಲಿ ಒಂದೇ ಒಂದು ಹಿಂದೂ ಕುಟುಂಬ: ದುರ್ಗಾ ದೇವಿಗೆ ಮುಸ್ಲಿಮರಿಂದ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಘಟನೆ ಹಿಂದೂ-ಮುಸ್ಲಿಂ ಏಕತೆಗೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ ಅಲೀಮುದ್ದೀನ್ ಸ್ಟ್ರೀಟ್, ಷರೀಫ್ ಲೇನ್‌ನಲ್ಲಿ ಎಲ್ಲಾ ಮುಸ್ಲಿಮರು ಒಟ್ಟಾಗಿ ಹಿಂದೂ ದೇವಿಯ ಆರಾಧನೆ  ಮಾಡುತ್ತಿದ್ದಾರೆ.

ಇಲ್ಲಿ ಒಂದೇ ಒಂದು ಹಿಂದೂ ಕುಟುಂಬ ವಾಸಿಸುತ್ತಿದ್ದು, ಸುತ್ತಲೂ ಮುಸಲ್ಮಾನರೇ. ಹಿಂದೆ ಇಲ್ಲಿ ಅನೇಕ ಹಿಂದೂ ಕುಟುಂಬಗಳು ವಾಸವಾಗಿದ್ದವು. ಆದರೆ ಕಾರಣಾಂತರಗಳಿಂದ ಅವರೆಲ್ಲ ಅಲ್ಲಿಂದ ಬೇರೆಡೆಗೆ ತೆರಳಿದರು. ಇದೀಗ ಒಂದೇ ಕುಟುಂಬ ಇರುವುದರಿಂದ ಇಲ್ಲಿ 16 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ದುರ್ಗಾ ಮಾತೆಯ ಪೂಜೆಗೆ ಬ್ರೇಕ್‌ ಬಿದ್ದಿತ್ತು.

ಇಲ್ಲಿ ನೆಲೆಸಿರುವ ಸಯಂತ ಸೇನ್ ಎಂಬ ಹಿಂದೂ ಕುಟುಂಬ ಸ್ಥಳೀಯ ಮುಸ್ಲಿಮರನ್ನು ಭೇಟಿ ಮಾಡಿ ದುರ್ಗಾ ಮಾತೆಯ ಪೂಜೆ ನಡೆಸಲು ಸಹಕರಿಸುವಂತೆ ಕೋರಲಾಗಿತ್ತು. ಅದರಂತೆ ಸ್ಥಳೀಯ ಮುಸ್ಲಿಂ ಕ್ಲಬ್‌ಗೆ ಸೇರಿದ ಕೆಲ ಯುವಕರು ಜಮಾಯಿಸಿ ಹಿಂದಿನಂತೆ ದುರ್ಗಾ ಮಾತೆಯ ಪೂಜೆಯನ್ನು ನೆರವೇರಿಸಲು ನಿರ್ಧರಿಸಿದರು. ಅಂದುಕೊಂಡಂತೆ ದುರ್ಗಾ ಮಾತೆಯ ಪೂಜೆ ನಡೆಯುತ್ತಿದೆ. ಸಯಂತ ಸೇನ್ ಅವರ ಕುಟುಂಬದವರು ಮತ್ತು ಅನೇಕ ಮುಸ್ಲಿಮರು ಈ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!