ಎಸ್.ಡಿ.ಪಿ.ಐ ಮಾಜಿ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಮನೆ ಮೇಲೆ ದಾಳಿ

ಹೊಸದಿಗಂತ ವರದಿ ಉಡುಪಿ:

ಶುಕ್ರವಾರ ನಗರದ ಕಿನ್ನಿಮೂಲ್ಕಿ ಕನ್ನರ್ಪಾಡಿ ದೇವಸ್ಥಾನದ ಬಳಿಯಿರುವ ಎಸ್.ಡಿ.ಪಿ.ಐ ಮಾಜಿ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್  ಮನೆಗೆ ಉಪ ಕಮೀಷನರ್ ಕೆ.ರಾಜು ಅವರ ನೇತೃತ್ವದ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

ದಾಳಿಯ ಸಂದರ್ಭದಲ್ಲಿ ನಜೀರ್ ಮನೆಯಲ್ಲಿ ಒಂದು ಪೆನ್ ಡ್ರೈವ್, ಪಿ.ಎಫ್.ಐ ಸಂಬಂಧಪಟ್ಟ ಪುಸ್ತಕ ಹಾಗು ಪಿ.ಎಫ್.ಐ ನ ಎರಡು ಸ್ಮರಣಿಕೆಗಳು ಲಭಿಸಿದ್ದು, ವಸ್ತುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ನಜೀರ್  ಸಹೋದರ ಬಶೀರ್ ಅಂಬಾಗಿಲಿನ ಮನೆಗೆ ದಾಳಿ ನಡೆಸಿದ್ದು, ಪಿ.ಎಫ್.ಐ ನ ಪುಸ್ತಕ ಹಾಗು ಎಸ್.ಡಿ.ಪಿ.ಐ ನ ಸ್ಮರಣಿಕೆಗಳು ಲಭಿಸಿದ್ದು, ವಸ್ತುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಡಿವೈಎಸ್ಪಿ ಸುಧಾಕರ್ ನಾಯ್ಕ್, ನಗರ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಲಾಗಿದೆ.

ಪೋಲಿಸರಿಗೂ ತಪಾಸಣೆ
ನಜೀರ್ ಮತ್ತು ಬಶೀರ್ ಅವರ ಮನೆಯನ್ನು ಪರಿಶೀಲನೆ ನಡೆಸುವ ವೇಳೆ ಪೋಲಿಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಮನೆಯವರ ಸಮ್ಮುಖದಲ್ಲಿ ಉಪ ಕಮೀಷನರ್ ರಾಜು ಅವರು ಪರಿಶೀಲನೆ ನಡೆಸಿ, ಮನೆಯ ಒಳಗೆ ಪರಿಶೀಲನೆಗೆ ಕಳುಹಿಸಿದ್ದಾರೆ. ಪೋಲಿಸರು ಹೊರಗಿನಿಂದ ತಂದು ಇಟ್ಟಿದ್ದಾರೆ ಎಂಬ ಆರೋಪ ಬರಬಾರದೆಂದು ಈ ನಿಯಮವನ್ನು ಪಾಲಿಸಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!