ಶೋಭಯಾತ್ರೆಯಲ್ಲಿ ಧಾರ್ಮಿಕ ಸೌಹಾರ್ದತೆ: ಮುಸ್ಲಿಮರಿಂದ ರಾಮನ ವಿಗ್ರಹಕ್ಕೆ ಪುಷ್ಪಾರ್ಚನೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಒಂದೆಡೆ ಧಾರ್ಮಿಕ ಕಲಹ ನಡೆದರೆ, ಮತ್ತೊಂದೆಡೆ ಧಾರ್ಮಿಕ ಸೌಹಾರ್ದತೆ ನೆಲೆಸಿದೆ. ನಾವೆಲ್ಲರೂ ಒಂದೇ ಎಂಬುದು ಈ ಸ್ಥಳದಲ್ಲಿ ಸಾಬೀತಾಗಿದೆ. ಇತರ ಧರ್ಮದವರ ಧಾರ್ಮಿಕ ಆಚಾರ-ವಿಚಾರ, ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ತೋರಬೇಕು ಎಂಬ ಸಂದೇಶವನ್ನು ಇಲ್ಲಿನ ಜನ ಸಾರಿದ್ದಾರೆ.

ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದ ಹಿಂದೂ ಏಕತಾ ಯಾತ್ರೆಯಲ್ಲಿ ಅಪರೂಪದ ದೃಶ್ಯ ಕಂಡುಬಂದಿದೆ. ಮುಸ್ಲಿಂ ಬಾಂಧವರು ರಾಮನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಸೌಹಾಋದತೆ ಮೆರೆದಿದ್ದಾರೆ. ಬಂಡಿ ಸಂಜಯ್ ಏಕತಾ ಯಾತ್ರೆ ಹೆಸರಿನಲ್ಲಿ ಹನುಮಾನ್ ಶೋಭಾಯಾತ್ರೆ ನಡೆಸಿದರು. ಈ ಮೆರವಣಿಗೆಯಲ್ಲಿ ಶ್ರೀರಾಮ ಮತ್ತು ಹನುಮಾನ್ ಮೂರ್ತಿಗಳನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ರಾಜೀವ್ ಚೌಕ್ ತಲುಪುತ್ತಿದ್ದಂತೆ ಕಟ್ಟಡದ ಮೇಲಿನಿಂದ ರಾಮನ ಮೂರ್ತಿಗೆ ಮುಸ್ಲಿಮರು ಪುಷ್ಪಾರ್ಚನೆ ಮಾಡಿ ಗೌರವ ಸೂಚಿಸಿದರು.

ಹೈದರಾಬಾದ್ ನಲ್ಲಿ ಪ್ರತಿ ವರ್ಷ ನಡೆಯುವ ಗಣೇಶ ಮೆರವಣಿಗೆ ವೇಳೆ ಪಾತಬಸ್ತಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಹಿಂದೂಗಳಿಗೆ ಎಳನೀರು, ಮಜ್ಜಿಗೆ ಪ್ರಸಾದ ನೀಡುವ ನಿದರ್ಶನಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!