ಇದೇನು ಹೊಟ್ಟೆನಾ…ಸ್ಟೀಲ್‌ ಪಾತ್ರೆ ಅಂಗಡಿನಾ?: ಆಶ್ಚರ್ಯಚಕಿತರಾದ ವೈದ್ಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಈತನನ್ನು ಪರೀಕ್ಷಿಸಿದ ವೈದ್ಯರು ಈತನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಆತನ ಹೊಟ್ಟೆಯಲ್ಲಿ 63ಸ್ಟೀಲ್ ಸ್ಪೂನ್ ಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದ ಮನ್ಸೂರಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮನ್ಸೂರಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೋಪದ ಗ್ರಾಮದ ವಿಜಯ್ ಎಂಬ ವ್ಯಕ್ತಿ ಮಾದಕ ವ್ಯಸನಿಯಾಗಿದ್ದು, ಚಟ ಬಿಡಿಸಲು ಕುಟುಂಬಸ್ಥರು ಆತನನ್ನು ಶಾಮ್ಲಿಯಲ್ಲಿರುವ ಮಾದಕ ವ್ಯಸನ ನಿಗ್ರಹ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ವಿಜಯ್ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದು, ಏಕಾಏಕಿ ಡಿ-ಅಡಿಕ್ಷನ್ ಸೆಂಟರ್‌ನಲ್ಲಿರುವ ವಿಜಯ್ ಆರೋಗ್ಯ ಹದಗೆಟ್ಟಿದೆ. ಕೂಡಲೇ ಕೇಂದ್ರದವರು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ವಿಜಯ್‌ನನ್ನು ಮುಜರಾಯಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಜಯ್ ಗೆ ಪರೀಕ್ಷೆ ನಡೆಸಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ. ವಿಜಯ್ ಹೊಟ್ಟೆಯಲ್ಲಿ ನರೋಬ್ಬರಿ 63 ಚಮಚಗಳು ಪತ್ತೆಯಾಗಿವೆ ಪ್ರಸ್ತುತ ವಿಜಯ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದರು.

ಈ ಚಮಚಗಳು ಹೊಟ್ಟೆಯೊಳಗೆ ಹೇಗೆ ಬಂದವು ಎಂದು ವೈದ್ಯರು ಪ್ರಶ್ನಿಸಿದ್ದಾರೆ. ಚಮಚ ನುಂಗುವುದಂದರೇನು ತಮಾಷೆ ವಿಷಯವಾ? ಅಷ್ಟು ನೋವು ಹೇಗೆ ಸಹಿಸಲು ಸಾಧ್ಯ ಎಂದು ಕುಟುಂಬಸ್ಥರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮಾದಕ ವ್ಯಸನ ನಿರ್ಮೂಲನಾ ಕೇಂದ್ರದ ಸಿಬ್ಬಂದಿ ವಿಜಯ್‌ಗೆ ಬಲವಂತವಾಗಿ ಚಮಚ ತಿನ್ನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ವಿಜಯ್ ದೂರು ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!