ಸಿದ್ದರಾಮಯ್ಯಗೆ ಜಾಣಕುರುಡು : ಸಿ.ಟಿ. ಮಂಜುನಾಥ್

ಹೊಸದಿಗಂತ ವರದಿ ಮಂಡ್ಯ :

ದೇಶಭಕ್ತಿ ಹಾಗು ಭಯೋತ್ಪದನೆಗೆ ವ್ಯತ್ಯಾಸಗೊತ್ತಿಲ್ಲದ ಸಿದ್ದರಾಮ್ಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪಿ.ಎಫ್.ಐ.ಗೆ ಹೋಲಿಸುತ್ತಿರುವುದನ್ನು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ತೀವ್ರವಾಗಿ ಖಂಡಿಸಿದ್ದಾರೆ.

ಆರ್.ಎಸ್.ಎಸ್. ಧ್ಯೇಯ ಮತ್ತು ಸಾತ್ಕಾರ‌್ಯಗಳನ್ನು ಟೀಕಿಸುತ್ತಿಸುತ್ತಿರುವ ಸಿದ್ದರಾಮಯ್ಯರವರಿಗೆ, ದೇಶಭಕ್ತರು ಯಾರು, ದೇಶ ವಿಭಜಕರು ಯಾರು ಎಂಬುದು ತಿಳಿಯದಂತಾಗಿದಿಯೇ ? ಅಥವಾ ಜಾಣಕುರುಡು ತನವೇ? ದೇಶದ ಶಿಸ್ತು ಬದ್ದ ಸಂಘಟನೆಯ ಬಗ್ಗೆ ಮಾನತಾಡುವ ಮೊದಲು , ಅರಿತು ಮಾತನಾಡಲಿ, ದೇಶದಲ್ಲಿ ನೆರೆ ಪ್ರವಾಹ , ಬರಗಾಲ, ಸುನಾಮಿ, ಭೂಕಂಪ ಬಂದಾಗ ಜನರ ನೆರವಿಗೆ ಧಾವಿಸಿದ್ದು ಇದೆ ಸಂಘಟನೆ ಎಂಬುದನ್ನು ಮರೆಯಬಾರದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಸಂಧರ್ಭದಲ್ಲಿ ಮೃತಪಟ್ಟ , ಮಕ್ಕಳಿದ್ದರೂ ಮೃತರ ಚಿತಾಭಸ್ಮವನ್ನು ಪಡೆಯಲು ಬಾರದೆ ಇದ್ದಂತಹ ಸಂಧರ್ಭದಲ್ಲಿ , ಸಾವಿರಾರು ಚಿತಾಭಸ್ಮವನ್ನು ನದಿಯಲ್ಲಿ ವಿವಿಧಾನಗಳ ಸಮೇತ ಮಕ್ಕಳ ಸ್ಥಾನದಲ್ಲಿ ನಿಂತು ವಿಸರ್ಜನೆ ಮಾಡಿದ್ದೂ ಇದೆ ಆರ್.ಎಸ್.ಎಸ್. ಕಾರ್ಯಕರ್ತರು, ಕೋವಿಡ್‌ನಿಂದ ಮೃತ ಪಟ್ಟ ಸಾವಿರಾರು ಮೃತದೇಶಗಳನ್ನು ಅವರ ಕುಟುಂಬದವರೇ ಮುಟ್ಟಲು ಹಿಂಜರೆಯುತಿದ್ದ ಸಂಧರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದೂ ಇದೆ ಕಾರ್ಯಕರ್ತರೇ. ಕೋವಿಡ್ ಸಮಯದಲ್ಲಿ ತುತ್ತು ಅನ್ನಕ್ಕೂ ಪರೆದಾಡುತಿದ್ದ ವಸತಿರಹಿತ ಕೂಲಿ ಕಾರ್ಮಿಕರಿಗೆ ತಮ್ಮ ಮನೆಯಲ್ಲಿದ್ದ ಅಕ್ಕಿ ಬೇಳೆ, ಸೇರಿದಂತೆ ಆಹಾರವನ್ನು ವಿತರಣೆ ಮಾಡಿದ್ದು ನಮ್ಮ ಕಾರ್ಯಕರ್ತರು ಎಂದು ತಿಳಿಸಿದ್ದಾರೆ.

ಶಿಸ್ತು ಬದ್ದವಾಗಿ ಕಟ್ಟಲ್ಪಟ್ಟಂತಹ ಸಂಘದ ಒಳಹರವು ಒಳರಚನೆ ಇತರರಿಗೆ ಮಾದರಿ. ಮನೆ ಮಠ ತಮ್ಮವರೆಲ್ಲರನ್ನು ಬದಿಗಿಟ್ಟು ಸಂಘ ಬಯಸುತ್ತಿರುವ ಭಲಿಷ್ಟ ಭಾರತದ ನಿರ್ಮಾಣಕಾರ್ಯದಲ್ಲಿ ಸಂತರಂತೆ ಕಾಯಾ ವಾಚ, ಮಾನಸ ದುಡಿಯುತ್ತಿದ್ದಾರೆ. ಭಾರತವನ್ನು ಅಖಂಡವಾಗಿ ನೋಡಬೇಕೆನ್ನುವುದು ಆರ್.ಎಸ್.ಎಸ್.ನ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ. ಅದೇ ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಬೇಕು, ಮೊಘಲಿಸ್ಥಾನ ನಿರ್ಮಾಣ ಮಾಡಬೇಕೆನ್ನುವ, ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಹುಟ್ಟಿದ ಈ ಹುನ್ನಾರಕ್ಕೆ ದುಡಿಯುತ್ತಿದ್ದ ದೇಶವಿರೋ ಪಿ.ಎಫ್.ಐ ಸಂಘಟನೆಯನ್ನು ಇಂದು ಕೇಂದ್ರ ಸರ್ಕಾರ ನಿಷೇಸಿದೆ.
ಪಿಎಫ್‌ಐ ದೇಶವಿರೋ ಕೃತ್ಯದಲ್ಲಿ ತೊಡಗಿದೆ ಎಂಬ ಅರಿವಿದ್ದರೂ, ಕೇಂದ್ರ ಹಾಗೂ ಗುಪ್ತಚರ ಇಲಾಖೆ ಮಾಹಿತಿಯನ್ನು ಆ ಸಂಘಟನೆಯ 175 ಪ್ರಕರಣಗಳನ್ನು ವಜಾ ಮಾಡಿ ಅದರಲ್ಲಿ ಭಾಗಿಯಾಗಿದ್ದ 1600 ಮಂದಿ ಉಗ್ರರಿಗೆ ಸ್ವಾತಂತ್ರ್ಯ ನೀಡಿದ್ದು ನಿಮ್ಮ ಭಾಗ್ಯಗಳಲ್ಲೊಂದಾಗಿದೆ ಎಂದು ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಅನೇಕ ಸಚಿವರು, ಮುಖಂಡರು ಆರ್‌ಎಸ್‌ಎಸ್ ಮೂಲದವರೇ ಆಗಿದ್ದಾರೆ. ಅವರೆಲ್ಲರನ್ನೂ ನಿಮ್ಮ ಮಾತಿನಲ್ಲಿ ದೇಶದ್ರೋಹಿಗಳು ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಮಂಜುನಾಥ್, ಇನ್ನಾದರೂ ಇಂತಹ ಕೀಳು ಮಟ್ಟದ ರಾಜಕೀಯ ಬಿಟ್ಟು ಅಖಂಡ ಭಾರತವನ್ನು ದೃಷ್ಠಿಯಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!