ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಜನರ ಬೆಂಬಲ ಪಡೆದು ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ ರಚಿಸಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
“ಅಶೋಕ್ ಗೆಹ್ಲೋಟ್ ಮತ್ತು ನಾನು ಮುಂಬೈ ಮತ್ತು ಕೊಂಕಣ ಉಸ್ತುವಾರಿ ವಹಿಸಿದ್ದೇವೆ. ನನ್ನ ಅವಲೋಕನವೆಂದರೆ ಜನರು ನಮಗೆ ಮತ ಹಾಕಲಿದ್ದಾರೆ, ನಾವು ಸರ್ಕಾರವನ್ನು ರಚಿಸಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.