Sunday, July 3, 2022

Latest Posts

ಭಾಷೆಯನ್ನು ವಿವಾದ ಮಾಡುವವರಿಗೆ ನನ್ನ ಬೆಸ್ಟ್ ವಿಷಸ್…ಅದನ್ನೇ ಮಾಡುತ್ತಿರಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ಒಂದು ಭಾಷೆ ವಿವಾದದ ಕೇಂದ್ರ ಬಿಂದು ಆಗಬಾರದು. ಆದರೆ ಇಂದು ಕೆಲವರು ಅದನ್ನು ವಿವಾದವನ್ನಾಗಿ ಮಾಡುತ್ತಾರೆ. ಅವರಿಗೆ ನನ್ನ ಬೆಸ್ಟ್ ವಿಷಸ್. ವಿವಾದ ಮಾಡುವವರು ಅದನ್ನೇ ಮಾಡುತ್ತಿರಲಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಬೆಂಗಳೂರಿನ ಐಐಎಸ್ಸಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಮಾತೃ ಭಾಷೆ ಬಹಳ‌ ಮುಖ್ಯ. ಜಪಾನ್ ಈಗ ಅತ್ಯಂತ ಅಭಿವೃದ್ಧಿ ಹೊಂದಿದ ಸೂಪರ್ ಪವರ್ ರಾಷ್ಟ್ರವಾಗಿದೆ. ಅಲ್ಲಿ ಅವರು ತಮ್ಮ ಮಾತೃ ಭಾಷೆಗೆ ಆದ್ಯತೆ ನೀಡಿದ್ದಾರೆಇಂಗ್ಲಿಷಿಗೆ ಆದ್ಯತೆ ನೀಡಿಲ್ಲ ಎಂದರು.
ಇನ್ನು ನಾವೆಲ್ಲರೂ ಇಂದು ಹಿಂದಿ ಬಳಸ ಬೇಕಾ? ಅಥವಾ ಮಾತೃ ಭಾಷೆ ಬಳಸಬೇಕಾ ಎಂಬ ಚರ್ಚೆ ನಡೆಯುತ್ತಿದೆ, ನಾನು ಕನ್ನಡ, ಒಡಿಯಾ, ಹಿಂದಿ, ಗುಜರಾತಿ, ಪಂಜಾಬಿ, ಆಂಗ್ಲ ಭಾಷೆಯ ಪರವಾಗಿಯೂ ಇದ್ದೇನೆ. ಆದರೆ ಒಂದು ವ್ಯಾಕರಣ ಬದ್ದವಾಗಿ ಯೋಚಿಸಲು ಮಾತೃ ಭಾಷೆ ಸಹಕಾರ ಮಾಡುತ್ತದೆ ಎಂದರು.
ಎನ್‌ಇಪಿಯಲ್ಲಿ ಮಾತೃ ಭಾಷೆ ಹಾಗೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ನಾನು ಒಡಿಯಾ, ಹಿಂದಿ, ಇಂಗ್ಲಿಷ್​ ಮಾತನಾಡುತ್ತೇನೆ. ಆಂಗ್ಲದಲ್ಲಿ ಮಾತನಾಡುವ ವೇಳೆ ನಾನು ಮೊದಲು ಒಡಿಶಾದಲ್ಲಿ ಯೋಚಿಸಿ ಅದನ್ನು ಹಿಂದಿಗೆ ಭಾಷಾಂತರ ಮಾಡಿ ಬಳಿಕ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss