ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್, ಹಾಲಿವುಡ್ ಎರಡರಲ್ಲೂ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಇದೀಗ ತಾಯ್ತನದ ಬಗ್ಗೆ ಮಾತನಾಡಿದ್ದಾರೆ.
ಮಗು ಪಡೆದುಕೊಳ್ಳುವುದು ನನ್ನ ಹಾಗೂ ನಿಕ್‌ನ ಜೀವನದ ದೊಡ್ಡ ಕನಸಾಗಿದೆ. ದೇವರು ಕೊಟ್ಟಾಗ ಎಲ್ಲವೂ ಆಗುತ್ತದೆ. ನಾನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರಬಹುದು ಆದರೆ. ನನ್ನ ಜೀವನಕ್ಕೆ ಮಗುವಿನ ಆಗಮನ ಆಗುತ್ತದೆ ಎಂದಾಗ ಎಲ್ಲದಕ್ಕೂ ಬ್ರೇಕ್ ನೀಡಿ ತಾಯ್ತನಕ್ಕೆ ಗಮನ ನೀಡುತ್ತೇನೆ ಎಂದಿದ್ದಾರೆ.
ಸಿನಿಮಾಗಳು ನನಗೆ ತುಂಬಾನೇ ಮುಖ್ಯ ಆದರೆ ನನ್ನ ಜೀವನದಲ್ಲಿ ಮಗು ಬರುವುದು, ಅದೊಂದು ಕನಸು. ನನ್ನ ತಾಯಿ ಕೂಡ ಅಜ್ಜಿಯಾಗೋಕೆ ಕಾಯ್ತಿದ್ದಾರೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.