ನನ್ನ ಕಣ್ಣೀರು ನನ್ನ ದೇಶ ನೋಡಬಾರದು: ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಭಾವುಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Womens World Cup) ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ಸ್ವಲ್ಪ ಅಂತರದಲ್ಲಿ ಎಡವಿದ್ದು, ಈ ಮೂಲಕ ಸೋಲು ಅನುಭವಿಸಿದೆ.

ಇದಾದ ಬಳಿಕ ಟೀಂ ಇಂಡಿಯಾ (Team India) ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಭಾರತ ಮಹಿಳಾತಂಡ ಆಸ್ಟ್ರೇಲಿಯಾ (Australia) ವಿರುದ್ಧ 5 ರನ್‌ಗಳ ವಿರೋಚಿತ ಸೋಲು ಕಂಡಿತು. ಇದರಿಂದ ಮೈದಾನದಲ್ಲಿ ಬ್ಯಾಟ್ ಬಿಸಾಡಿ ಬೇಸರ ಹೊರಾಕಿದ ಕೌರ್ ಮೈದಾನದಿಂದ ಹೊರಬರುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಪಂದ್ಯದ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ, ಕೌರ್ ತಮ್ಮ ಕಣ್ಣೀರನ್ನು ಮರೆಮಾಚಲು ಕೂಲಿಂಗ್ ಗ್ಲಾಸ್ ಧರಿಸಿಯೇ ಮಾತನಾಡಿದ್ದಾರೆ.

ಈ ವೇಳೆ ಕಾಮೆಂಟೇಟರ್ ಏಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ ಹರ್ಮನ್‌ಪ್ರೀತ್ ತುಂಬಾ ಭಾವುಕರಾದರು. ತಾನು ಅಳುವುದನ್ನು ನನ್ನ ದೇಶ ನೋಡಬಾರದೆಂದು ಬಯಸುತ್ತೇನೆ. ಹಾಗಾಗಿ ನಾನು ಈ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದೇನೆ ಎಂದು ನಾಯಕಿ ಹೇಳಿದ್ದಾರೆ.

ನಾವು ಇನ್ನಷ್ಟು ಸುಧಾರಣೆ ಕಂಡುಕೊಳ್ಳುತ್ತೇವೆ. ಮತ್ತೊಮ್ಮೆ ಈ ರೀತಿ ಸೋಲಲು ಅನುವು ಮಾಡಿಕೊಡುವುದಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಸೋಲುತ್ತೇವೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ನಾನು ರನೌಟ್ ಆದ ಹಾದಿ ನೋಡುತ್ತಿದ್ದರೇ, ಇದಕ್ಕಿಂತ ದುರಾದೃಷ್ಟ ಬೇರೆ ಯಾವುದೂ ಇಲ್ಲ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!