ಸಿರಿಯಾದಿಂದ ನನ್ನ ನಿರ್ಗಮನ ಯೋಜಿತವಾಗಿರಲಿಲ್ಲ: ಮೊದಲ ಬಾರಿಗೆ ಮೌನ ಮುರಿದ ಮಾಜಿ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿರಿಯಾದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡ ನಂತರ ಬಶರ್ ಅಲ್-ಅಸ್ಸಾದ್ ಅವರು ಮೊದಲ ಬಾರಿಗೆ ಟೆಲಿಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಸಿರಿಯಾದಿಂದ ನನ್ನ ನಿರ್ಗಮನವು ಯೋಜಿತವಾಗಿರಲಿಲ್ಲ ಅಥವಾ ಯುದ್ಧವು ಅಂತಿಮ ಗಂಟೆಗಳಲ್ಲಿ ಸಂಭವಿಸಲಿಲ್ಲ, ಆದರೆ ರಷ್ಯಾ ಕೋರಿಕೆಯ ಮೇರೆಗೆ ಡಮಾಸ್ಕಸ್‌ ನಿಂದ ಸ್ಥಳಾಂತರವಾಗ ಬೇಕಾಯಿತು ಎಂದಿದ್ದಾರೆ.

ಸಿರಿಯಾದಿಂದ ರಷ್ಯಾಗೆ ಪಲಾಯನ ಗೈದ ನಂತರ, ಅಸ್ಸಾದ್ ಅವರಿಂದ ಬಂದ ಮೊದಲ ಪ್ರತಿಕ್ರಿಯೆಯಾಗಿದ್ದು, ತಾನು ಡಿಸೆಂಬರ್ 8 ರ ಮುಂಜಾನೆಯವರೆಗೂ ಡಮಾಸ್ಕಸ್‌ನಲ್ಲಿಯೇ ಇದೆ. ನಂತರ ಆದೇ ದಿನದ ಸಂಜೆ ದೇಶವನ್ನು ತೊರೆದೆ ಎಂದು ಹೇಳಿದ್ದಾರೆ.

ತನ್ನ ಮೊದಲ ಹೇಳಿಕೆಯಲ್ಲಿ, “ಮಾಸ್ಕೋ ಬೇಸ್ ಕಮಾಂಡ್ ಡಿಸೆಂಬರ್ 8 ರ ಭಾನುವಾರದ ಸಂಜೆ ರಷ್ಯಾಕ್ಕೆ ತಕ್ಷಣದ ಸ್ಥಳಾಂತರಿಸುವಿಕೆಯನ್ನು ವ್ಯವಸ್ಥೆಗೊಳಿಸುವಂತೆ ವಿನಂತಿಸಿದೆ. ಇದು ಡಮಾಸ್ಕಸ್‌ನ ಪತನದ ಒಂದು ದಿನದ ನಂತರ ನಡೆದಿದೆ. ಅಂತಿಮ ಸೇನಾ ಸ್ಥಾನಗಳನ್ನು ಬಂಡುಕೊರರು ವಶಪಡಿಸಿಕೊಂಡ ನಂತರವಾಗಿದೆ. ಇವರನ್ನು ಡಿಸೆಂಬರ್ 8 ರ ಸಂಜೆ ಸಿರಿಯಾದ ಹ್ಮೆಮಿಮ್ ನೆಲೆಯಿಂದ ರಷ್ಯಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಸ್ಸಾದ್ ಅವರೇ ಬಹಿರಂಗಪಡಿಸಿದರು. ಸೇನಾ ನೆಲೆಯ ಮೇಲೆ ಡ್ರೋನ್ ದಾಳಿಯ ನಂತರವಾಗಿದ್ದು, ಆ ದಿನ ಬೆಳಿಗ್ಗೆ ಅವರು ಡಮಾಸ್ಕಸ್‌ನಿಂದ ಹೊರಟಿದ್ದಾಗಿ ಹೇಳಿದರು.

ಸಂಘರ್ಷದ ಸಮಯದಲ್ಲಿ ತಾನು ಕೆಳಗಿಳಿಯುವುದು ಅಥವಾ ಆಶ್ರಯ ಪಡೆಯುವುದನ್ನು ಎಂದಿಗೂ ಪರಿಗಣಿಸಿಲ್ಲ ಅಥವಾ ಯಾವುದೇ ವ್ಯಕ್ತಿ ಅಥವಾ ಪಕ್ಷ ಅಂತಹ ಪ್ರಸ್ತಾಪವನ್ನು ಮಾಡಿಲ್ಲ ಎಂದು ಅಸ್ಸಾದ್ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕರ ದಾಳಿಯ ವಿರುದ್ಧ ಹೋರಾಟವನ್ನು ಮುಂದುವರಿಸುವುದು ಏಕೈಕ ಕ್ರಮವಾಗಿದೆ ಎಂದು ಅವರು ಗಮನಿಸಿದ್ದು, “ಭಯೋತ್ಪಾದಕರು” ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಅಧ್ಯಕ್ಷರಾಗಿ ಅವರ ಸ್ಥಾನದಲ್ಲಿ ಯಾವುದೇ ಉದ್ದೇಶವಿಲ್ಲ ಎಂದು ಹೊರ ಬಂದೆ. ರಾಷ್ಟ್ರವು ಭಯೋತ್ಪಾದನೆಯ ಕೈಗೆ ಬಿದ್ದಾಗ ಮತ್ತು ಅರ್ಥಪೂರ್ಣ ಕೊಡುಗೆ ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಾಗ, ಯಾವುದೇ ಸ್ಥಾನವು ಉದ್ದೇಶರಹಿತವಾಗುತ್ತದೆ ಎಂದರು.

ಸತತ 11 ದಿನಗಳ ಆಕ್ರಮಣದ ನಂತರ, ಇಸ್ಲಾಮಿಸ್ಟ್ ಸಂಘಟನೆಯಾದ ಹಯಾತ್ ತಹ್ರೀರ್ ಅಲ್-ಶಾಮ್ (HTS) ನೇತೃತ್ವದ ಬಂಡಾಯ ಗುಂಪು ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿತು. ಇದರ ಪರಿಣಾಮ ಬಶರ್​ ಅವರು ತಮ್ಮ ಕುಟುಂಬದೊಂದಿಗೆ ರಷ್ಯಾಕ್ಕೆ ಓಡಿಹೋದರು. ಇದರೊಂದಿಗೆ ಬಶರ್​ ಅವರ ಅಧಿಕಾರ ಪತನವು ರಷ್ಯಾಗೆ ಗಮನಾರ್ಹ ಹಿನ್ನಡೆಯನ್ನು ಸೂಚಿಸಿದ್ದು, ಇರಾನ್ ಜೊತೆಗೆ ಮಾಜಿ ಸಿರಿಯನ್ ಅಧ್ಯಕ್ಷರ ಮುಖ್ಯ ಮಿತ್ರವಾಗಿತ್ತು ಮತ್ತು 2015 ರಿಂದ ಸಿರಿಯಾದಲ್ಲಿ ಮಿಲಿಟರಿಯಲ್ಲಿ ಅಸು ತೊಡಗಿಸಿಕೊಂಡಿತ್ತು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!