ಹೊಸದಿಗಂತ ವರದಿ, ಮಳವಳ್ಳಿ :
ಬೆಂಗಳೂರಿನ ಜನರಿಗೆ ನಿತ್ಯ ಶುದ್ಧ ಕುಡಿಯುವ ನೀರೊದಗಿಸುವುದೇ ನನ್ನ ಮುಂದಿನ ದಿಟ್ಟ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಕಾವೇರಿ 6ನೇ ಹಂತದ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ನಗರವೊಂದರ 50 ಲಕ್ಷ ಜನರಿಗೆ ಹೊಸದಾಗಿ ಕುಡಿಯುವ ನೀರಿನ ಯೋಜನೆ ಐದೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರವೇ ಪ್ರಾರಂಭ ಮಾಡಿತ್ತು. ಎಂಟು ದಿನಗಳ ಕೆಲಸದ ನಂತರ ಉದ್ಘಾಟನೆ ಕಾಂಗ್ರೆಸ್ ಸರ್ಕಾರವೇ ಸಿದ್ಧವಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಇಲ್ಲಿ ಏನೇನು ಸಮಸ್ಯೆ ಇದೆ ಎಂದು ನಾನೇ ಕಣ್ಣಾರೆ ನೋಡಬೇಕು ಎಂಬ ಕಾರಣದಿಂದ ಬಂದಿದ್ದೇನೆ. ಈ ಯೋಜನೆಯಿಂದಾಗಿ ಬೆಂಗಳೂರಿನ 50ಲಕ್ಷ ಮಂದಿಗೆ ಉಪಯೋಗವಾಗಲಿದೆ. 5,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. 4,500 ಕೋಟಿ ರೂ. ಕುಡಿಯುವ ಕುಡಿಯುವ ನೀರಿನ ಯೋಜನೆಗೆ ವೆಚ್ಚವಾಲಿದ್ದು, ಒಂದು ಸಾವಿರ ಕೋಟಿ ರೂ. ಡ್ರೈನೇಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ವೆಚ್ಚವಾಗುತ್ತದೆ ಎಂದರು.