ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹುಲಿ ಉಗುರಿದ ಪೆಂಡೆಂಟ್ ವಿಷಯ ಮುನ್ನೆಲೆಗೆ ಬಂದಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಕತ್ತಿನಲ್ಲೂ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಕಂಡುಬಂದಿತ್ತು.
ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಮೃಣಾಲ್ ಧರಿಸಿರುವುದು ಒರಿಜಿನಲ್ ಹುಲಿಯ ಉಗುರು ಅಲ್ಲ, ಇದು ಪ್ಲಾಸ್ಟಿಕ್ ಎಂದಿದ್ದಾರೆ. ಮದುವೆ ವೇಳೆ ಮಗನಿಗೆ ಗಿಫ್ಟ್ ಬಂದಿದ್ದ ಪೆಂಡೆಂಟ್ ಇದು, ಒರಿಜಿನಲ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆಯ ಮನೆಗೆ ಅರಣ್ಯಾಧಿಕಾರಿಗಳು ತೆರಳಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ನಾವು ಮಾಂಸಹಾರಿಗಳಲ್ಲ, ಪ್ರಾಣಿಬಲಿ ನಮಗೆ ಇಷ್ಟವಿಲ್ಲ. ಮಗ ಧರಿಸಿದ್ದು ಪ್ಲಾಸ್ಟಿಕ್ ಪೆಂಡೆಂಟ್ ಎಂದಿದ್ದಾರೆ.