ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕರಿಗೆ ತಮ್ಮ ನೆಚ್ಚಿನ ನಾಯಕನ ಬಗ್ಗೆ ಹೇಳಲಾಗದ ಅಭಿಮಾನವಿರುತ್ತದೆ. ನಟರ ಮೇಲಿರುವ ತಮ್ಮ ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಕೆಲವರು ಆಕಾಶದಲ್ಲಿರುವ ನಕ್ಷಗಳಿಗೆ ನಟರ ಹೆಸರಿಟ್ಟರೆ, ಕೆಲವರು ದೇವಾಲಯ ಕಟ್ಟಿಸಿ ಪೂಜೆ ಮಾಡುತ್ತಾರೆ. ಈಗಾಗಲೇ ಖುಷ್ಬೂ, ನಯನತಾರಾ, ಸಮಂತಾ ಮತ್ತು ನೀತಿ ಅಗರ್‌ವಾಲ್‌ಗೆ ದೇವಾಲಯ ಕಟ್ಟಿದ್ದು, ಕೇಳಿದ್ದೇವೆ. ಅಂತೆಯೇ ರಜನಿಕಾಂತ್‌ಗೂ ಅಭಿಮಾನಿಯೊಬ್ಬರು ಮಂದಿರ ನಿರ್ಮಿಸಿದ್ದು, ಪೂಜೆ-ಕೈಂಕರ್ಯಗಳನ್ನು ನೆರವೇರಿಸುತ್ತಾರೆ.
ಮಧುರೈನ ಕಾರ್ತಿಕ್ ಎಂಬ ಅಭಿಮಾನಿ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಮಂದಿರವನ್ನು ನಿರ್ಮಿಸಿ ನಿತ್ಯ ಪೂಜೆ, ಹಾರತಿ, ಅಭಿಷೇಕ ಮಾಡುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ದೇವಸ್ಥಾನದಲ್ಲಿ 250 ಕೆಜಿ ತೂಕದ ರಜನಿಕಾಂತ್ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ. ವಿಗ್ರಹದ ಕೆಳಗೆ ತನ್ನ ತಂದೆ-ತಾಯಿ ಮತ್ತು ಗಣೇಶನ ಫೋಟೋವನ್ನು ಇಟ್ಟು, ಪ್ರತಿದಿನ ಪೂಜೆ ಮಾಡುತ್ತಾರೆ.
#Watch | மதுரை: திருமங்கலத்தைச் சேர்ந்த கார்த்திக் என்பவர் நடிகர் ரஜினிகாந்த்துக்கு கோயில் கட்டி, 250 கிலோ எடை கொண்ட கருங்கல்லில் அவருக்கு சிலை வைத்து நாள்தோறும் வழிபட்டு வருகிறார்.#SunNews | #Madurai | @Rajinikanth pic.twitter.com/RXut6Ot1W4
— Sun News (@sunnewstamil) October 26, 2023