ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಪುನೀತ್​ರನ್ನು ನೆನೆದ ದೆಹಲಿ ಸಿಎಂ ಕೇಜ್ರಿವಾಲ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ಒಂದು ವರ್ಷ. ಅವರ ನೆನಪಲ್ಲೇ ಅಭಿಮಾನಿಗಳು ನಿತ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ಸಾಮಾನ್ಯರಿಂದ ಗಣ್ಯರವರೆಗೂ ಅಪ್ಪು ನೆನೆದು ಕಂಬನಿ ಮಿಡಿಯುತ್ತಲೇ ಇದ್ದಾರೆ, ಅಪ್ಪುಗೆ ನಮಿಸುತ್ತಲೇ ಇದ್ದಾರೆ.
ಇದೀಗ ದೆಹಲಿ ಸಿಎಂ ಕೂಡ ಅಪ್ಪುವನ್ನು ಸ್ಮರಿಸಿದ್ದಾರೆ.

 

ಕನ್ನಡದಲ್ಲೇ ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ‘ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ’ ಎಂದಿದ್ದಾರೆ. ‘ಇಂದು ಡಾ.ಪುನೀತ್ ರಾಜ್​ಕುಮಾರ್​ ಅವರ ಪುಣ್ಯತಿಥಿ. ಅವರ ನೆನಪು ನನ್ನನ್ನು ಗಾಢವಾಗಿ ಕಾಡುತ್ತಿದೆ. ಪುನೀತ್​ ಅವರ ಸಿನಿಮಾ, ಹಾಡು, ದಯೆ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿದರೆ ಅವರು ನಮ್ಮನ್ನು ಎಂದಿಗೂ ತೊರೆದಿಲ್ಲ. ಅವರು ನಮ್ಮೊಂದಿಗೇ ಇದ್ದಾರೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್’ ಎಂದು ಬರೆದುಕೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!