ಸತತ ವೈಫಲ್ಯದಲ್ಲಿ ರಾಹುಲ್: ಪಂತ್​ಗೆ ಅವಕಾಶ ನೀಡಿ ಎಂಬ ಕೂಗಿಗೆ ಬ್ಯಾಟಿಂಗ್ ಕೋಚ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ-20 ವಿಶ್ವಕಪ್ ನಲ್ಲಿ ಭಾರತ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು, ಈಗಾಗಲೇ 2 ಗೆಲುವು ದಾಖಲಿಸಿಕೊಂಡು ಗ್ರೂಪ್​ ‘ಬಿ’ ಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ತಂದುವು ಉತ್ತಮ ಸಂಘಟಿತ ಪ್ರದರ್ಶನ ನೀಡುತ್ತಿದ್ದು, ಆದರೂ ಉಪ ನಾಯಕ ಕೆ.ಎಲ್. ರಾಹುಲ್ ಬ್ಯಾಟಿಂಗ್ ವೈಫಲ್ಯ ಸಣ್ಣ ಚಿಂತೆ ನೀಡುತ್ತಿದೆ.

ವಿಶ್ವಕಪ್​ನಲ್ಲಿ ಆರಂಭಿಕನಾಗಿ ಮೈದಾನಕ್ಕಿಳಿಯುವ ರಾಹುಲ್ ಕ್ರಿಸ್​ ಕಚ್ಚಿ ನಿಲ್ಲುವಲ್ಲಿ ವಿಫಲರಾಗುತ್ತಿದ್ದು, ರಾಹುಲ್ ಬ್ಯಾಟ್ ನಿಂದ ರನ್ ಬರುತ್ತಿಲ್ಲ.

ರಾಹುಲ್ ಪಾಕಿಸ್ತಾನ (4) ಹಾಗೂ ನೆದರ್ಲೆಂಡ್ (9) ವಿರುದ್ಧ ಎರಡಂಕಿಯ ರನ್ ಕಲೆ ಹಾಕಿದ್ದು, ಟೀಮ್ ಇಂಡಿಯಾಗೆ ಆರಂಭದ ಕೊರತೆ ಎದ್ದು ಕಾಣುತ್ತಿದೆ.

ಇದರಿಂದ ಸೌತ್​ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬೇಕು ಎಂಬ ಮಾತು ಬರುತ್ತಿದೆ. ರಾಹುಲ್ ಹೊರಗಿಟ್ಟು ಪಂತ್​​ ತಂಡಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಕೂಗು ಕೇಳಿಸುತ್ತಿದೆ.

ಈ ಕೂಗಿಗೆ ತಿಕ್ರಿಯಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಕೆ.ಎಲ್​. ರಾಹುಲ್​ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ನಾವು ಏನನ್ನೂ ಯೋಚಿಸಿಲ್ಲ. ರಾಹುಲ್ ಬ್ಯಾಟಿಂಗ್ ಸಾಮರ್ಥ್ಯ ಅದ್ಭುತವಾಗಿದೆ. ಕೇವಲ ಎರಡು ಪಂದ್ಯದಿಂದ ಬ್ಯಾಟಿಂಗ್ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ಅಭ್ಯಾಸದ ವೇಳೆ ರಾಹುಲ್ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!